ಶನಿವಾರ, ಫೆಬ್ರವರಿ 27, 2021
28 °C

ಅರಬೇವು ಸೊಪ್ಪು ತಿಂದ 7 ಕುರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ತಾಲ್ಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ಗುರುವಾರ ಸಂಜೆ ಅರಬೇವಿನ ಮರದ ಸೊಪ್ಪನ್ನು ತಿಂದು ಏಳು ಕುರಿಗಳು ಮೃತಪಟ್ಟಿವೆ.

ಹುಲಿಕಟ್ಟೆ ಗ್ರಾಮದ ಬಸವರಾಜಪ್ಪ ತಳವಾರ ಅವರಿಗೆ ಸೇರಿದ ನಾಲ್ಕು ಕುರಿಗಳು ಹಾಗೂ ಪಾಂಡುರಂಗ ಅವರಿಗೆ ಸೇರಿದ ಮೂರು ಕುರಿಗಳು ಅಸುನೀಗಿವೆ.

‘ಮೂರು ಮನೆಗಳಿಗೆ ಸೇರಿದ ಸುಮಾರು 200 ಕುರಿಗಳನ್ನು ಮೇಯಿಸಲು ಕರೆದುಕೊಂಡು ಹೋಗಿದ್ದೆವು. ರಸ್ತೆ ಪಕ್ಕದಲ್ಲಿ ಕಡಿದಿದ್ದ ಅರಬೇವಿನ ಮರದ ಒಣಗಿದ ಸೊಪ್ಪನ್ನು ಸಂಜೆ 4.30 ಸುಮಾರಿಗೆ ಕುರಿಗಳು ತಿಂದವು. ಕೆಲವೇ ಕ್ಷಣದಲ್ಲಿ ಒಂದೊಂದಾಗಿ ಕುರಿಗಳು ನೆಲಕ್ಕೆ ಬಿದ್ದು ಒದ್ದಾಡತೊಡಗಿದವು. ತಕ್ಷಣವೇ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡೆಸಿದೆವು. ಆದರೆ, ಏಳು ಕುರಿಗಳು ಮಾತ್ರ ಅಷ್ಟರೊಳಗೆ ಮೃತಪಟ್ಟಿದ್ದವು’ ಎಂದು ಬಸವರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶುಕ್ರವಾರ ಪಶು ವೈದ್ಯರು ಬಂದು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿ ಬಂದ ಬಳಿಕ ಯಾವ ಕಾರಣಕ್ಕೆ ಮೃತಪಟ್ಟಿವೆ ಎಂಬ ಬಗ್ಗೆ ನಿಖರವಾದ ಕಾರಣ ಹಿತಿ ಲಭಿಸಲಿದೆ ಎಂದಿದ್ದಾರೆ. ಮೃತ ಕುರಿಗಳಿಗೆ ಶೀಘ್ರವೇ ಪರಿಹಾರವನ್ನು ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು