ಭಾನುವಾರ, ಅಕ್ಟೋಬರ್ 25, 2020
28 °C

ದಾವಣಗೆರೆ: 82 ಮಂದಿಗೆ ಕೊರೊನಾ ಸೋಂಕು, 194 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 82 ಮಂದಿಗೆ ಕೊರೊನಾ ಇರುವುದು ಬುಧವಾರ ದೃಢಪಟ್ಟಿದೆ. 194 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 29, ಹರಿಹರ ತಾಲ್ಲೂಕಿನಲಲ್ಲಿ 17, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 16, ಚನ್ನಗಿರಿ ತಾಲ್ಲೂಕಿನಲ್ಲಿ 13, ಜಗಳೂರು ತಾಲ್ಲೂಕಿನಲ್ಲಿ 5 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ ಇಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 18,756 ಮಂದಿಗೆ ಕೊರೊನಾ ಬಂದಿದೆ. 17,184 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.  249 ಮಂದಿ ಮೃತಪಟ್ಟಿದ್ದಾರೆ. 1,323 ಸಕ್ರಿಯ ಪ್ರಕರಣಗಳಿವೆ.

4 ಜನರಿಗೆ ಕೊರೊನಾ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ನಾಲ್ಕು ಜನರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತ ಪಟ್ಟಿದೆ.

ಕೊಕ್ಕನೂರು, ಹಿಂಡಸಗಟ್ಟೆಯ ಇಬ್ಬರು ಪುರುಷರು, ಎಳೆಹೊಳೆ ಹಾಗೂ ಬಿಳಸನೂರಿನ ಇಬ್ಬರು ಮಹಿಳೆಯರಿಗೆ ಕೊರೊನಾ ಬಂದಿದೆ.

ಆರು ಮಂದಿಗೆ ಸೋಂಕು

ಸಾಸ್ವೆಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಬೀರಗೊಂಡನಹಳ್ಳಿ 2, ಕುಳಗಟ್ಟೆ, ಲಿಂಗಾಪುರ, ಚಿಕ್ಕಬಾಸೂರು, ಹನಗವಾಡಿ ತಲಾ ಒಂದು ಸೇರಿ ಒಟ್ಟು 6 ಕೊರೊನಾ ಪಾಸಿಟೀವ್ ಪತ್ತೆಯಾಗಿದೆ ಎಂದು ಉಪತಹಶಿಲ್ದಾರ್ ಪರಮೇಶ್ ನಾಯ್ಕ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು