ಭಾನುವಾರ, ಜೂಲೈ 12, 2020
28 °C

ಪೂಜೆಗೆ ನೀರು ತರಲು ಹೋದ ಬಾಲಕ ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪೂಜೆಗೆಂದು ನೀರು ತರಲು ಹೋದ ಬಾಲಕನೊಬ್ಬ ತಾಲ್ಲೂಕಿನ ಹೊನ್ನೂರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಗ್ರಾಮದ ಕೃಷಿಕ ಮಂಜುನಾಥ್ ಎಂಬುವರ ಮಗ ಗುಣಶೇಖರ್ (14) ಮೃತ ಬಾಲಕ. 8ನೇ ತರಗತಿ ಓದುತ್ತಿದ್ದ ಈತ ತಂದೆ-ತಾಯಿಯ ಜೊತೆಯಲ್ಲಿ ದೇವರ ಕಾರ್ಯಕ್ಕೆಂದು ಜಮೀನಿಗೆ ತೆರಳಿದ್ದ ವೇಳೆ ದೇವರ ಪೂಜೆಗಾಗಿ ನೀರು ತರಲು ಕೆರೆಗೆ ಬಂದಿದ್ದಾನೆ.

ಮಗ ಬಾರದೇ ಇದ್ದುದರಿಂದ ಆತಂಕಗೊಂಡ ತಂದೆ–ತಾಯಿಗಳು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಆನಂತರ ಕೆರೆಯ ಬಳಿ ಬಂದು ನೋಡಿದಾಗ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.