ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಮತಿ: ಬೈಕ್‌ಗೆ ಕಾರು ಡಿಕ್ಕಿ- ಇಬ್ಬರಿಗೆ ಗಾಯ

Published 24 ಜೂನ್ 2023, 15:18 IST
Last Updated 24 ಜೂನ್ 2023, 15:18 IST
ಅಕ್ಷರ ಗಾತ್ರ

ನ್ಯಾಮತಿ: ಹೊನ್ನಾಳಿ– ಶಿವಮೊಗ್ಗ ರಸ್ತೆಯ ಸುರಹೊನ್ನೆ ಗ್ರಾಮದ ಬೆಳಗುತ್ತಿ ಕ್ರಾಸ್ ಬಳಿ ಗುರುವಾರ ಬೈಕ್ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಾಯಗೊಂಡಿದ್ದಾರೆ.

ಹೊನ್ನಾಳಿ ತಾಲ್ಲೂಕು ಹನುಮಸಾಗರದ ನವೀನ (22) ಮತ್ತು ಪಿ. ಮರಿಯಪ್ಪ(40) ಗಾಯಗೊಂಡವರು.

ಕುದುರೆಕೊಂಡ ಗ್ರಾಮದಲ್ಲಿ ಕಲ್ಲುಒಡ್ಡು ಕೆಲಸಕ್ಕೆ ಹೋಗಲು ಬೆಳಗುತ್ತಿ ಕ್ರಾಸ್‌ನಲ್ಲಿ ಬಲಭಾಗಕ್ಕೆ ತಿರುವು ಪಡೆಯುವಾಗ ಶಿವಮೊಗ್ಗ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರರಿಗೆ ತಲೆ, ಕೈ ಕಾಲು, ಸೊಂಟಕ್ಕೆ ಪೆಟ್ಟಾಗಿದೆ. ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಓಂಕಾರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬೈಕ್ ಸವಾರ ನವೀನ ಅವರು ಶನಿವಾರ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT