ಹರಿಹರ: ಭದ್ರಾ ಕಾಲುವೆ ಜಾಲ, ತುಂಗಭದ್ರ ನದಿ, ದೇವರಬೆಳೆಕೆರೆ ಪಿಕ್ಅಪ್ ಸೇರಿ ವಿವಿಧ ಜಲಮೂಲಗಳಿಂದಾಗಿ ಜಿಲ್ಲೆಯಲ್ಲಿ ಶೇ 80ರಷ್ಟು ನೀರಾವರಿ ಪ್ರದೇಶ ಹೊಂದಿದ ಹರಿಹರ ತಾಲ್ಲೂಕಿನಲ್ಲಿ ಈ ಬಾರಿ 6,500 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.

ಮಳೆಯಾಶ್ರಿತ ಬೆಳೆಗಳಲ್ಲಿ ಮೆಕ್ಕೆಜೋಳ ಪ್ರಧಾನ ಬೆಳೆಯಾಗಿದ್ದು, ಭದ್ರಾ ಕಾಲುವೆ, ನದಿ ಹಾಗೂ ಇತರೆ ಜಲಮೂಲಗಳಿಂದ ದೂರವಿರುವ ಪ್ರದೇಶಗಳೆನಿಸಿದ ಕೊಂಡಜ್ಜಿ, ಕೆಂಚನಹಳ್ಳಿ, ಕುರುಬರಹಳ್ಳಿ, ಹೊಟಿಗೇನಹಳ್ಳಿ, ನಾಗೇನಹಳ್ಳಿ, ರಾಮತೀರ್ಥ, ಹೊಸಳ್ಳಿ, ಬಿಳಸನೂರು, ಹೊಳೆಸಿರಿಗೆರೆ, ಭಾನುವಳ್ಳಿ, ಜಿ.ಟಿ.ಕಟ್ಟೆ, ಕೊಪ್ಪ ಹಾಗೂ ಇತರೆ ಗ್ರಾಮಗಳ ಆಸುಪಾಸಿನ ಜಮೀನುಗಳಲ್ಲಿ ಮಳೆಯಾಶ್ರಿತ ಬೆಳೆಯ ಬಿತ್ತನೆ ಕಾರ್ಯ ನಡೆದಿದೆ.

‘ಮೇ ತಿಂಗಳಲ್ಲೇ ಮುಂಗಾರು ಪೂರ್ವ ಮಳೆ ಹಾಗೂ ನಂತರ ಮುಂಗಾರು ಮಳೆ ಹದವಾಗಿ ಸುರಿದ ಪರಿಣಾಮ ಮಳೆಯಾಶ್ರಿತ ಪ್ರದೇಶದ ರೈತರು ಹುಮ್ಮಸ್ಸಿನಿಂದಲೇ ಬಿತ್ತನೆ ಕಾರ್ಯ ನಡೆಸಿದ್ದಾರೆ. ತಾಲ್ಲೂಕಿನಲ್ಲಿ ಈವರೆಗೆ 6200 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 200 ಹೆಕ್ಟೇರ್ನಲ್ಲಿ ತೊಗರಿ, ಹೆಸರು, ಅಲಸಂದಿ, ಉದ್ದು ಸೇರಿ ವಿವಿಧ ದ್ವಿದಳ ಧಾನ್ಯಗಳನ್ನು 50 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ನಟರಾಜ್ ಎಸ್. ಮಾಹಿತಿ ನೀಡಿದರು.

‘ಮೂರ್ನಾಲ್ಕು ದಿನಗಳಿಂದ ತಾಲ್ಲೂಕಿನಲ್ಲಿ ಮಳೆ ಬಿಡುವು ನೀಡಿದ್ದು, ಮೋಡ ಮುಚ್ಚಿದ ವಾತಾವರಣದ ನಡುವೆ ಆಗಾಗ್ಗೆ ಪ್ರಖರ ಬಿಸಿಲು ಬೀಳುತ್ತಿದೆ. ಸತತ ಮಳೆ ಬರದೆ ಆಗಾಗ ಮಳೆ ಬಂದರೆ ಮಳೆಯಾಶ್ರಿತ ಪ್ರದೇಶದ ರೈತರು ಬಂಪರ್ ಬೆಳೆ ಕಾಣಬಹುದಾಗಿದೆ’ ಎಂದು ಹೊಳೆಸಿರಿಗೆರೆಯ ಪ್ರಗತಿಪರ ರೈತ ಕುಂದೂರು ಮಂಜಪ್ಪ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.