ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕನೂರು | ಆಂಜನೇಯ ಸ್ವಾಮಿ ಕಾರ್ತಿಕೋತ್ಸವ

Published 1 ಜನವರಿ 2024, 5:11 IST
Last Updated 1 ಜನವರಿ 2024, 5:11 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಕೊಕ್ಕನೂರು ಗ್ರಾಮದ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಕಾರ್ತಿಕೋತ್ಸವದಲ್ಲಿ ಭಾಗಿಯಾಗಿದ್ದರು.

ಸಮೀಪದ ಕೊಕ್ಕನೂರು ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ಶನಿವಾರ ಬೆಳಿಗ್ಗೆ 6 ಗಂಟೆಗೆ ಫಲ ಪಂಚಾಮೃತಾಭಿಷೇಕ ನಡೆಯಿತು. ನಂತರ ಸ್ವರ್ಣಾಲಂಕಾರ ಮಾಡಲಾಯಿತು. ನಾನಾ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಸಂಜೆ 6 ಗಂಟೆಯಿಂದ ಸಾವಿರಾರು ಭಕ್ತರು ದೀಪ ಹಚ್ಚಿ ಸಂತಾನ ಫಲ, ಆರೋಗ್ಯ ನೀಡುವಂತೆ, ಕಷ್ಟ ಕಾರ್ಪಣ್ಯಗಳನ್ನ ದೂರ ಮಾಡುವಂತೆ ಪ್ರಾರ್ಥನೆ ಮಾಡಿದರು. ನಂತರ ಸ್ವಾಮಿಯ ಪ್ರಸಾದ ಸ್ವೀಕರಿಸಿದರು.

ರಾತ್ರಿ ಹನ್ನೊಂದು ಗಂಟೆಗೆ ಗ್ರಾಮದ ಎಲ್ಲ ದೇವರುಗಳ ಕಾರ್ತಿಕಕ್ಕೆ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಸರ್ವಾಲಂಕಾರ ಪಲ್ಲಕ್ಕಿರೋಹಣ ಮಾಡಲಾಯಿತು. ಬಾಜ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ಗ್ರಾಮದ ಎಲ್ಲ ದೇವರುಗಳಿಗೆ ಕಾರ್ತಿಕೋತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT