ಶುಕ್ರವಾರ, ಜನವರಿ 17, 2020
21 °C

ವಾಟ್ಸ್‌ಆ್ಯಪ್‌ನಲ್ಲಿ ಎನ್‌ಆರ್‌ಸಿ ವಿರೋಧಿ ಬರಹ: ಯುವಕ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

NRC

ದಾವಣಗೆರೆ: ಯುವಕನೊಬ್ಬ ತನ್ನ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ಡಿಪಿಗೆ ಪಾಕಿಸ್ತಾನದ ಬಾವುಟ ಹಾಕಿದ್ದು, ಅದರ ಮೇಲೆ ‘ಎನ್‌ಆರ್‌ಸಿ ರಿಜೆಕ್ಟೆಡ್’ ಎಂದು ಬರೆದುಕೊಂಡಿದ್ದ ಆರೋಪದ ಮೇರೆಗೆ ಹಿಂದೂ ಜಾಗರಣ ವೇದಿಕೆ ಸಂಘಟನೆ ಕಾರ್ಯಕರ್ತರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯು ನಗರದ ಆರ್‌ಟಿಒ ಬಳಿಯ ಹೊಸಕ್ಯಾಂಪ್‌ನ ನಿವಾಸಿ ಎಂದು ಹೇಳಲಾಗಿದ್ದು, ಈತ ಬಂಗಾರದ ಅಂಗಡಿಯೊಂದರಲ್ಲಿ ಪಾಲಿಶ್‌ ಕೆಲಸ ಮಾಡುತ್ತಿದ್ದ ವೇಳೆ ‘ಟಿಪ್ಪು ಸುಲ್ತಾನ್‌ ಬಾಯ್ಸ್‌’ ಎಂದು ಗ್ರೂಪ್‌ ಮಾಡಿಕೊಂಡಿದ್ದ ಎಂಬ ವಿಷಯ ಗ್ರಾಹಕರಿಗೆ ತಿಳಿದಿದೆ. ಬಸವನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು