ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಕೆ ಕಂಡ ಅಡಿಕೆ ದರ: ರೈತರಲ್ಲಿ ಮಂದಹಾಸ

ಕಳೆದ ವರ್ಷಾಂತ್ಯದ ವೇಳೆ ಒಮ್ಮೆಲೆ ಕುಸಿತ ಕಂಡ ದರದಲ್ಲಿ ಕೊಂಚ ಏರಿಕೆ
Published 30 ಮೇ 2023, 16:35 IST
Last Updated 30 ಮೇ 2023, 16:35 IST
ಅಕ್ಷರ ಗಾತ್ರ

ದಾವಣಗೆರೆ: ಅಡಿಕೆ ದರ ಕೊಂಚ ಏರಿಕೆಯಾಗಿದ್ದು, ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಸದ್ಯ ಕೆಂಪಡಿಕೆ ದರ ಕ್ವಿಂಟಲ್‌ಗೆ ₹49,000ಕ್ಕೆ ಏರಿಕೆ ಕಂಡಿದೆ. ಎರಡು ತಿಂಗಳಲ್ಲಿ ಒಂದು ಕ್ವಿಂಟಲ್‌ಗೆ ₹1,500ದಷ್ಟು ಹೆಚ್ಚಾಗಿದೆ.

ಜನವರಿ, ಫೆಬ್ರುವರಿಯಲ್ಲಿ ಅಡಿಕೆ ದರ ₹47,000ದಿಂದ ₹48,000 ಇತ್ತು. ಏಪ್ರಿಲ್‌, ಮೇ ತಿಂಗಳಲ್ಲಿ ಅಡಿಕೆ ದರ ಏರಿಕೆಯಾಗುವುದು ಸಾಮಾನ್ಯ.

ಕಳೆದ ವರ್ಷದ ಸೆಪ್ಟೆಂಬರ್‌ ಹೊತ್ತಿಗೆ ಕ್ವಿಂಟಲ್‌ಗೆ ₹58,000ಕ್ಕೆ ಏರಿಕೆಯಾಗಿದ್ದ ಅಡಿಕೆ ದರ ಡಿಸೆಂಬರ್‌ ಹೊತ್ತಿಗೆ ಒಮ್ಮೆಲೇ ₹19,000ರಷ್ಟು ಕುಸಿತ ಕಂಡು ₹39,000ಕ್ಕೆ ಬಂದಿತ್ತು.

‘ಸೆಪ್ಟೆಂಬರ್‌ವರೆಗೂ ದರದಲ್ಲಿ ಏರಿಳಿತ ಇರುತ್ತದೆ. ದರ ₹49,000ರ ಆಸುಪಾಸಿನಲ್ಲೇ ಇರುವ ಸಾಧ್ಯತೆ ಇದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಕೆಂಪಡಿಕೆ ದರ ಇದೇ ರೀತಿಯಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ’ ಎಂದು ತೋಟ ಉತ್ಪನ್ನಗಳ ಮಾರಾಟ  ಸಹಕಾರ ಸಂಘದ (ತುಮ್ಕೋಸ್‌) ಅಧ್ಯಕ್ಷ ಆರ್‌.ಎಂ. ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT