ದಾವಣಗೆರೆ: ದೌರ್ಜನ್ಯ ಪ್ರಕರಣದಡಿ ಎಫ್ಐಆರ್, ಆರೋಪ ಪಟ್ಟಿ ಮತ್ತು ಶಿಕ್ಷೆಯ ಆಧಾರದ ಮೇಲೆ ವಿವಿಧ ಪ್ರಕರಣಗಳಲ್ಲಿ 162 ಸಂತ್ರಸ್ತರಿಗೆ ₹1.21 ಕೋಟಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಲ್ಕನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ 115 ಮತ್ತು ಪರಿಶಿಷ್ಟ ಪಂಗಡದ 47 ಸಂತ್ರಸ್ತರು ಇದರಲ್ಲಿ ಸೇರಿದ್ದಾರೆ ಎಂದರು.

2025ರ ಜನವರಿಯಿಂದ ಈವರೆಗೆ ಎರಡು ಕೊಲೆ ಪ್ರಕರಣ ದಾಖಲಾಗಿವೆ. ದೌರ್ಜನ್ಯ ಪ್ರಕರಣದಡಿ ಸರ್ಕಾರಿ ನೌಕರಿಗಾಗಿ 2 ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಈವರೆಗೆ 154 ಪ್ರಕರಣಗಳು ಬಾಕಿ ಇದ್ದು, ಇದೇ ವರ್ಷದ ಅಕ್ಟೋಬರ್ನಿಂದ ಈವರೆಗೆ 8 ಪ್ರಕರಣ ವಿಲೇವಾರಿಯಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಡಿವೈಎಸ್ಪಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.