ಮಂಗಳವಾರ, ಅಕ್ಟೋಬರ್ 26, 2021
26 °C

ಮಹಿಳೆಯರಿಂದ ಆಕರ್ಷಕ ಬೈಕ್‌ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ನಗರದಲ್ಲಿಂದು ಹಿಂದೂ ಜಾಗರಣಾ ವೇದಿಕೆಯಿಂದ ಮಹಿಳಾ ದ್ವಿಚಕ್ರ ವಾಹನ ರ‍್ಯಾಲಿ ನಡೆಸಲಾಯಿತು.

ರಾಮ್ ಆ್ಯಂಡ್‌ ಕೋ ವೃತ್ತದಿಂದ ಆರಂಭಗೊಂಡ ರ‍್ಯಾಲಿಗೆ ಸಂಸದ ಜಿ.ಎಂ. ಸಿದ್ದೇಶ್ವರ, ಮೇಯರ್‌ ಎಸ್‌.ಟಿ. ವೀರೇಶ್‌ ಇನ್ನಿತರ ಗಣ್ಯರು ಚಾಲನೆ ನೀಡಿದರು.

ದ್ವಿಚಕ್ರಗಳ ಜೊತೆಗೆ ಬುಲೆಟ್ ಮತ್ತಿತರೆ ಬೈಕ್ ಗಳ ಏರಿ ತಲೆಗೆ ಕೇಸರಿ ರುಮಾಲು ಧರಿಸಿ ಮಹಿಳೆಯರು ತಯಾರಾಗಿದ್ದರು. ಚಾಲನೆ ಸಿಗುತ್ತಿದಂತೆ ಸಾಲು ಸಾಲಾಗಿ ದ್ವಿಚಕ್ರ ವಾಹನ, ಬೈಕ್ ಗಳ ಓಡಿಸುತ್ತಾ ಗಮನ ಸೆಳೆದರು. ಮಂಜುಳಾ ಮಹೇಶ್, ಎಚ್.ಸಿ. ಜಯಮ್ಮ, ಭಾಗ್ಯ ಪಿಸಾಳೆ, ಸಹನಾ ಮಂಜುನಾಥ, ಸರೋಜಮ್ಮ ದೀಕ್ಷಿತ್, ಶೀಲಾ ಶ್ರೀನಿವಾಸ, ಶೃತಿ ಮಾರುತಿ ಸಹಿತ ಹಲವರು ಭಾಗವಹಿಸಿದ್ದರು.

ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಹಿಂದೂ ಜಾಗರಣ ವೇದಿಕೆಯ ಸತೀಶ್ ಪೂಜಾರಿ, ಗೋಪಾಲ್ ರಾವ್ ಸಾವಂತ್, ವಿನಾಯಕ ರಾನಡೆ, ತಿಪ್ಪೇಸ್ವಾಮಿ, ರಾಜೇಶ್, ಅರುಣ್ ಕುಮಾರ್ ನುಗ್ಗೇಹಳ್ಳಿ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.