ಬಸವಪ್ರಭು ಶರ್ಮ ಸೇರಿ ಐದು ಮಂದಿಗೆ ಮುಖ್ಯಮಂತ್ರಿ ಪದಕ

ದಾವಣಗೆರೆ: ಇಲ್ಲಿನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಸೇರಿ ಐದು ಮಂದಿ ಅಧಿಕಾರಿಗಳು 2019ರ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಜಗಳೂರು ಅಗ್ನಿಶಾಮಕ ಠಾಣೆಯ ಲೀಡಿಂಗ್ ಫೈರ್‌ಮನ್‌ಗಳಾದ ರೇವಣ ಸಿದ್ದಪ್ಪ ಕೆ, ಜಿ.ಪಿ. ರಾಮನಾಥ, ದಾವಣಗೆರೆ ಅಗ್ನಿಶಾಮಕ ಠಾಣೆಯ ಫೈರ್‌ಮನ್‌ಗಳಾದ ಹರಪನಹಳ್ಳಿ ತಾಲ್ಲೂಕು ಸಿಂಗ್ರಿಹಳ್ಳಿ ದೊಡ್ಡ ತಾಂಡಾದ ಅಶೋಕ ನಾಯ್ಕ್ ಹಾಗೂ ದಾವಣಗೆರೆಯ ಎಸ್.ಕೆ. ರಾಜೇಶ್ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದವರು.
ಜುಲೈ 13ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಇವರಿಗೆ ₹ 5 ಸಾವಿರ ಪ್ರೋತ್ಸಾಹ ಧನ ಹಾಗೂ ಪದಕ ಪ್ರದಾನ ಮಾಡಲಾಗುವುದು.
ಬಸವಪ್ರಭು ಶರ್ಮ ಅವರು 2018ರಲ್ಲಿ ಧಾರವಾಡದಲ್ಲಿ ಕಟ್ಟಡ ಕುಸಿತದಲ್ಲಿ ಹಲವರ ರಕ್ಷಣೆ ಸೇರಿ ಹಲವು ಕಾರ್ಯಗಳನ್ನು ಗುರುತಿಸಿ ಪದಕ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.