ದಾವಣಗೆರೆ: ಆನ್ಲೈನ್ ಆ್ಯಪ್ ಜೂಜಿನಲ್ಲಿ ₹18 ಲಕ್ಷ ಹಣ ಕಳೆದುಕೊಂಡು ಮನನೊಂದಿದ್ದ ಯುವಕನೊಬ್ಬ ನೇಣು ಹಾಕಿಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಪ್ರಿಂಟಿಂಗ್ ಪ್ರೆಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸರಸ್ವತಿ ನಗರದ ಶಶಿಕುಮಾರ್ ರಿತ್ತಿ (25) ಮೃತ ಯುವಕ.

ಒಂದು ವರ್ಷದಿಂದ ಆನ್ಲೈನ್ ಜೂಜು ಆಡುತ್ತಿದ್ದ.ಆರಂಭದಲ್ಲಿ ಹೂಡಿದ್ದ ₹ 500ಕ್ಕೆ ಕೆಲವೇ ದಿನಗಳಲ್ಲಿ ₹ 5 ಸಾವಿರ ಸಿಕ್ಕಿತ್ತು. ಸುಲಭವಾಗಿ ಹಣ ಗಳಿಸಲು ಅನೇಕರ ಬಳಿ ಸಾಲ ಮಾಡಿ ಹಂತ ಹಂತವಾಗಿ ₹ 18 ಲಕ್ಷವನ್ನು ತೊಡಗಿಸಿದ್ದರು. ₹19 ಕೋಟಿ ವಾಪಸ್ ಬಂದಿದ್ದಾಗಿ ಆ್ಯಪ್ನಲ್ಲಿ ತೋರಿಸುತ್ತಿತ್ತು. ಆದರೆ, ಅದು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗದಿರುವುದರಿಂದ ಮನನೊಂದಿದ್ದರು. ಹಣ ಮರಳಿಸುವಂತೆ ಸಾಲಗಾರರು ಕಾಟ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೆಟಿಜೆ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.