ಸೋಮವಾರ, ಮೇ 17, 2021
31 °C

ನಿಂತಿದ್ದ ಟ್ರ್ಯಾಕ್ಟರ್ ಚಲಿಸಿ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರೆಹಳ್ಳಿ (ತ್ಯಾವಣಿಗೆ): ತ್ಯಾವಣಿಗೆ ಸಮೀಪದ ಅರೆಹಳ್ಳಿ ಗ್ರಾಮದಲ್ಲಿ ಮನೆಯ ಎದುರಿನ ಶೆಡ್‌ನಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಚಲಿಸಿ ಬಾಲಕ ಮೃತಪಟ್ಟಿದ್ದಾನೆ.

ಗ್ರಾಮದ ನಾಗರಾಜ ಅವರ ಪುತ್ರ ಮನು (7) ಮೃತಪಟ್ಟ ಬಾಲಕ.

ಮನೆ ಮುಂದಿನ ಶೆಡ್ ಬಳಿ ಮಕ್ಕಳೊಂದಿಗೆ ಮನು ಆಟವಾಡುತ್ತಿದ್ದ. ಶೆಡ್‌ನಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಚಲಿಸಿ ಮನು ಮೇಲೆ ಹರಿದಿದೆ.

‘ಏಕಾಏಕಿ ಟ್ರ್ಯಾಕ್ಟರ್ ಚಲಿಸುತ್ತಿದ್ದಾಗ ಇತರ ಮಕ್ಕಳಿಗೆ ಬೇರೆಡೆ ಸರಿಯುವಂತೆ ಸೂಚಿಸಿದ್ದ ಮನು ಟ್ರ್ಯಾಕ್ಟರ್ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.