ಶನಿವಾರ, ಮೇ 21, 2022
23 °C

ದಾವಣಗೆರೆ: ಆಟವಾಡಲು ಹೋಗಿದ್ದ ಬಾಲಕ ರೈಲು ಡಿಕ್ಕಿಯಾಗಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಆಟವಾಡಲು ಹೋಗಿದ್ದ ಬಾಲಕ ರೈಲ್ವೆ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಭಾನುವಾರ ಮೃತಪಟ್ಟಿದ್ದಾನೆ.

ಭಗತ್‌ ಸಿಂಗ್‌ನಗರದ ಡೇವಿಡ್‌ ಅವರ ಮಗ ಸಚಿನ್‌ (15) ಮೃತಪಟ್ಟವನು. ಭಾನುವಾರ ರಜೆ ಇದ್ದಿದ್ದರಿಂದ ಗೆಳೆಯರ ಜತೆಗೆ ಸುತ್ತಾಡುತ್ತಾ ಆಟವಾಡಲು ಹೋಗಿದ್ದ. ಡಿಸಿಎಂ ಟೌನ್‌ಶಿಪ್‌ ಬಳಿ ರೈಲು ಬರುತ್ತಿದ್ದಾಗಲೇ ದಾಟಲು ಮುಂದಾಗಿದ್ದರಿಂದ ರೈಲು ಡಿಕ್ಕಿ ಹೊಡೆದಿದೆ. ತಲೆಗೆ ಏಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ದಾವಣಗೆರೆ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲು ಬರುವಾಗ ಸೆಲ್ಫಿ ತೆಗೆಯಲು ಹೋದಾಗ ರೈಲು ತಾಗಿ ಈ ದುರ್ಘಟನೆ ಉಂಟಾಗಿದೆ. ಡಬಲ್‌ ಟ್ರ್ಯಾಕ್‌ ಇರುವುದರಿಂದ ಇನ್ನೊಂದು ಟ್ರ್ಯಾಕಲ್ಲಿ ರೈಲು ಬರಲಿದೆ ಎಂದು ಭಾವಿಸಿ ಸೆಲ್ಫಿ ತೆಗೆಯಲು ನಿಂತಿದ್ದರಿಂದ ರೈಲು ಡಿಕ್ಕಿ ಹೊಡೆದಿದೆ ಎಂಬ ಮಾತುಗಳು ಹರಿದಾಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.