7

ಲಂಚ ಸ್ವೀಕಾರ: ಸಹಾಯಕ ನೋಂದಣಿ ಅಧಿಕಾರಿ ಎಸಿಬಿ ಬಲೆಗೆ

Published:
Updated:

ದಾವಣಗೆರೆ: ವಿದ್ಯಾನಗರದಲ್ಲಿರುವ ಸಹಕಾರ ಸಂಸ್ಥೆಗಳ ನೋಂದಣಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಹಾಯಕ ನೋಂದಣಿ ಅಧಿಕಾರಿ ಗೀತಾ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚನ್ನಗಿರಿ ತಾಲ್ಲೂಕು ಕತ್ತಲಗೆರೆ ರೈತಬಂಧು ಕೋ ಆಪರೇಟಿವ್‌ ಸೊಸೈಟಿಯ ನೋಂದಣಿಗಾಗಿ ಕತ್ತಲಗೆರೆ ರುದ್ರೇಶ್‌ ಎಂಬವರು ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನೋಂದಣಿ ಮಾಡಿರಲಿಲ್ಲ. ಬುಧವಾರ ರುದ್ರೇಶ್‌ ಸಹಕಾರ ಸಂಸ್ಥೆಗಳ ನೋಂದಣಿ ಕಚೇರಿಗೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸಿದ್ದಾರೆ. ₹ 25 ಸಾವಿರ ನೀಡಿದರೆ ನೋಂದಣಿ ಮಾಡಿಸಿಕೊಡುವುದಾಗಿ ಗೀತಾ ಭರವಸೆ ನೀಡಿದ್ದರು. ಗುರುವಾರ ₹ 15 ಸಾವಿರ ನೀಡುವುದಾಗಿ ರುದ್ರೇಶ್‌ ತಿಳಿಸಿ ಬಂದವರು ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಸಿದ್ದರು.

ಗುರುವಾರ ಮಧ್ಯಾಹ್ನ ರುದ್ರೇಶ್‌ ಅವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಗೀತಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !