ದಾವಣಗೆರೆ: ಖಾತೆ ಹಂಚಿಕೆ ವಿಷಯ ಮುಖ್ಯಮಂತ್ರಿಗಳಿಗೆ ಇರುವ ಪರಮಾಧಿಕಾರ.ಯಾವಾಗ ಹಂಚಿಕೆ ಮಾಡಬೇಕು ಎಂಬುದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಹರಿಹರದಲ್ಲಿ ನಡೆಯುತ್ತಿರುವ ಹರಜಾತ್ರೆಗೆ ಹೋಗುವ ಮುನ್ನ ಜಿ.ಎಂ.ಐ.ಟಿ ಹೆಲಿಪ್ಯಾಡ್ಗೆ ಬಂದಿದ್ದ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

ಪಂಚಮಸಾಲಿ ಲಿಂಗಾಯತ ಸಮುದಾದ ಮೂವರಿಗೆ ಸಚಿವ ಸ್ಥಾನ ಬೇಕು ಎಂದು ಕೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ‘ಸ್ವಾಮೀಜಿ ಹೇಳುವುದು ಸರಿ ಇದೆ. ಅವರ ಸಮಾಜದ ಅಭಿಪ್ರಾಯ ಹೇಳಬೇಕು ಹೇಳುತ್ತಾರೆ’ ಎಂದು ಹೇಳಿದರು.

ನೀವು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳೇ ಎಂಬ ಪ್ರಶ್ನೆಗೆ ‘ನನ್ನನ್ನು ನೋಡಿದರೆ ನಿಮಗೆ ಹಾಗೆ ಅನ್ನಿಸುತ್ತಾ’ ಎಂದು ಎಂದು ಮರು ಪ್ರಶ್ನೆ ಹಾಕಿದರು.

ನಿಮ್ಮ ಖಾತೆ ತೃಪ್ತಿ ತಂದಿದೆಯೇ ಎಂದು ಕೇಳಿದ್ದಕ್ಕೆ ‘ಮನುಷ್ಯನಿಗೆ ತೀರದ ಆಸೆ ಇರುತ್ತದೆ. ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು. ಯಾವುದೇ ಖಾತೆ ಕೊಟ್ಟರು ತೃಪ್ತಿಯಿಂದ ಕೆಲಸ ಮಾಡಬೇಕು’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.