ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸೈಟ್ಸ್‌ ಐಎಎಸ್‌ 150ಕ್ಕೂ ಅಭ್ಯರ್ಥಿಗಳು ತೇರ್ಗಡೆ

‘ಇನ್‌ಸೈಟ್ಸ್‌ ಐಎಎಸ್’ ಎಂದು ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್
Published 17 ಏಪ್ರಿಲ್ 2024, 7:46 IST
Last Updated 17 ಏಪ್ರಿಲ್ 2024, 7:46 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ‘ಇನ್‌ಸೈಟ್ಸ್‌ ಐಎಎಸ್‌’ನಲ್ಲಿ ತರಬೇತಿ ಪಡೆದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕರ್ನಾಟಕದಿಂದ ಈ ಬಾರಿ 28 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇರದಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆದ 20 ಅಭ್ಯರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ನೀಡಿರುವುದು ಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್’ ಎಂದು ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ತಿಳಿಸಿದ್ದಾರೆ.

‘ಉತ್ತಮ ರ‍್ಯಾಂಕಿಂಗ್‌ನೊಂದಿಗೆ ತೇರ್ಗಡೆಯಾದ ಈ ಅಭ್ಯರ್ಥಿಗಳಲ್ಲಿ ಕೆಲವರು ನೇರವಾದ ಬೋಧನಾ ತರಗತಿ (ಒಜಿಪಿ ಕೋರ್ ಬ್ಯಾಚ್‌) ಹಾಜರಾಗಿದ್ದಾರೆ. ಬಹಳಷ್ಟು ಅಭ್ಯರ್ಥಿಗಳು ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷಾ ಸರಣಿ ಮತ್ತು ಅಣಕು ಸಂದರ್ಶನಗಳಂತಹ ಹಲವಾರು ಕಾರ್ಯಕ್ರಮಗಳ ವಿದ್ಯಾರ್ಥಿಗಳಾಗಿದ್ದಾರೆ. ನಿಗದಿತ ವೇಳಾಪಟ್ಟಿ, ಶಿಸ್ತುಬದ್ಧ ತರಗತಿಗಳು, ಗುಣಮಟ್ಟದ ಮಾರ್ಗದರ್ಶನ, ಉತ್ತರ ಬರೆಯುವ ಕೌಶಲ ವೃದ್ಧಿ ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ವಿಶೇಷತೆಗಳಾಗಿದ್ದು, ಇಂಟಿಗ್ರೇಟೆಟ್ ಕೋಚಿಂಗ್ ಮಾದರಿಯಲ್ಲಿ ಅಭ್ಯರ್ಥಿಯನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT