ಭಾನುವಾರ, ಮಾರ್ಚ್ 7, 2021
31 °C
ಮರುಳು ಗುತ್ತಿಗೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ರಾಜಶೇಖರ

ಕಾನೂನು ಚೌಕಟ್ಟಿನಲ್ಲೇ ಮರಳು ಸಾಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಬಿ. ಪಾಟೀಲ ಮಂಗಳವಾರ ಹರಿಹರ ತಾಲೂಕಿನ ರಾಜನಹಳ್ಳಿಯ ಮರಳು ಗುತ್ತಿಗೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರಳು ಗುತ್ತಿಗೆದಾರರು ಕಾನೂನು ಬಾಹಿರವಾಗಿ ಮರಳು ಎತ್ತುವ ಕಾರ್ಯ ನಡೆಸುತ್ತಿದ್ದಾರೆ. ಒಂದು ಮೀಟರ್‌ ಅಡಿಯಷ್ಟೇ ಮರಳು ತೆಗೆಯಬೇಕು ಎಂದು ನಿಯಮ ಇದ್ದರೂ 10–15 ಅಡಿ ಆಳದಷ್ಟು ತೆಗೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ರಾಯಲ್ಟಿ ಶೇ 20 ಗ್ರಾಮ ಪಂಚಾಯಿತಿಗೆ ಬರಬೇಕು. ಆದರೆ ಇವರು ಓವರ್‌ಲೋಡ್‌ ಮಾಡಿ ಕಳುಹಿಸುವುದರಿಂದ ನಷ್ಟವಾಗುತ್ತಿದೆ. ಭದ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರಾಜನಹಳ್ಳಿ ಪಂಚಾಯಿತಿ ಅಧ್ಯಕ್ಷ ಮಹಾಂತೇಶ್‌, ಸದಸ್ಯ ಮಂಜುನಾಥ್‌ ಆರೋಪಿಸಿದರು.

ಗುತ್ತಿಗೆದಾರರು ಮರಳು ನೀತಿ ನಿಯಮಾವಳಿಯಡಿ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಹಾಗೂ ವಾಹನಗಳಲ್ಲಿ ಹೆಚ್ಚುವರಿ ಮರಳು ಸಾಗಾಟ ಮಾಡಬಾರದು. ಗ್ರಾಮ ಪಂಚಾಯಿತಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ಮಾಹಿತಿ ನೀಡಬೇಕು. ಗ್ರಾಮ ಪಂಚಾಯಿತಿ ಸಭೆಗಳಿಗೆ ಗುತ್ತಿಗೆದಾರರು ಹೋಗಬೇಕು ಎಂದು ಸಚಿವರು ಸೂಚಿಸಿದರು.

ತಹಶೀಲ್ದಾರ್ ರೆಹಾನ್ ಪಾಷ, ಪಿಡಿಒ ವಿಜಯಲಕ್ಷ್ಮೀ, ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಮ್ಮ, ಲಕ್ಷ್ಮಪ್ಪ, ವೀರಬಸಯ್ಯ, ಬಣಕಾರ್ ಹಾಲಪ್ಪ, ಮಂಜುನಾಥ್, ಮಂಜುಳಾ ಗೀರಿಶ್ ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು