ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಮಾತೆ ಚರ್ಚ್ ವಾರ್ಷಿಕೋತ್ಸವ: ತೇರಿನ ಮೆರವಣಿಗೆ ಇಂದು

Published 12 ಫೆಬ್ರುವರಿ 2024, 5:15 IST
Last Updated 12 ಫೆಬ್ರುವರಿ 2024, 5:15 IST
ಅಕ್ಷರ ಗಾತ್ರ

ಹರಿಹರ: ‘ಮಾತೆ ಮರಿಯಳ ಜೀವನ ವನಿತೆಯರ ಬಾಳಿಗೆ ಪ್ರೇರಣ’ ಧ್ಯೇಯವಾಕ್ಯದೊಂದಿಗೆ ಇಲ್ಲಿನ ಬಸಿಲಿಕ ಆರೋಗ್ಯ ಮಾತೆ ಚರ್ಚ್‌ನಲ್ಲಿ ವಾರ್ಷಿಕೋತ್ಸವದ ನಿಮಿತ್ತ ಸೆ. 8ರಂದು ಸಂಜೆ 5ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಪುಷ್ಪಾಲಂಕೃತ ತೇರಿನ ಮಹಾ ಮೆರವಣಿಗೆ ನಡೆಯಲಿದೆ.

ವಾರ್ಷಿಕೋತ್ಸವದ ನಿಮಿತ್ತ ಆ. 30ರಿಂದ ಸೆ. 9ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 5.15ರಿಂದ ಭದ್ರಾವತಿ ಧರ್ಮಾಧ್ಯಕ್ಷ ಜೋಸೆಫ್ ಅರುಮಚಾಡತ್ ಅವರಿಂದ ಕನ್ನಡ, ತೆಲುಗು, ಮಲಯಾಳಂ ಮತ್ತು ಶಿವಮೊಗ್ಗ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರಿಂದ ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಪೂಜಾರ್ಪಣೆ, ಬಲಿಪೂಜೆ ನಡೆಯಲಿದೆ.

ಸಂಜೆ 5ರಿಂದ ಚರ್ಚ್‌ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪುಷ್ಪಾಲಂಕೃತ ತೇರಿನ ಮಹಾ ಮೆರವಣಿಗೆ ನಡೆಯಲಿದೆ. ಸೆ. 9ರಂದು ಬೆಳಿಗ್ಗೆ 8, 10.30, ಮಧ್ಯಾಹ್ನ 12 ಹಾಗೂ 3ಗಂಟೆಗೆ ಬಲಿಪೂಜೆ ನಡೆಯಲಿವೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ಫಾದರ್ ಜಾರ್ಜ್ ಕೆ.ಎ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT