ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ತಂದಿದ್ದೇ ಕಾಂಗ್ರೆಸ್‌ವರು: ಎಸ್.ಎಸ್. ಮಲ್ಲಿಕಾರ್ಜುನ್

Published 29 ಆಗಸ್ಟ್ 2023, 16:25 IST
Last Updated 29 ಆಗಸ್ಟ್ 2023, 16:25 IST
ಅಕ್ಷರ ಗಾತ್ರ

ದಾವಣಗೆರೆ: 2016–17ರಲ್ಲಿ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ತಂದವರು ಕಾಂಗ್ರೆಸ್‌ನವರು. ಬಿಜೆಪಿಯವರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

‘ನಾವು ತಂದಿದ್ದೇವೆ ಎಂದು ಹೇಳುವವರಿಗೆ ನಾಚಿಕೆ ಆಗಬೇಕು. ಆಗ ದಾವಣಗೆರೆ 9ನೇ ಸ್ಥಾನದಲ್ಲಿತ್ತು. ಈಗ ಎಲ್ಲಿದೆ. ಈಗ ಊರನ್ನೆಲ್ಲ ಹಾಳು ಮಾಡಿದ್ದಾರೆ. ಅವರು(ಸಂಸದ ಸಿದ್ದೇಶ್ವರ) ಬಂದಿರುವುದೇ ದುಡ್ಡು ಮಾಡಲಿಕ್ಕೆ. ಆಗ ಅವರದ್ದೇ ಎಲ್ಲವೂ ನಡೆಯುತ್ತಿತ್ತು. ಈಗ ನನಗೇನು ಸಂಬಂಧ ಇಲ್ಲ ಎಂದು ಎಸ್‌.ಎ. ರವೀಂದ್ರನಾಥ್ ಅವರ ಮೇಲೆ ಹಾಕುತ್ತಿದ್ದಾರೆ. ಮೊಸರನ್ನು ತಿಂದು ಮೇಕೆಗೆ... ಒರೆಸಿತು’ ಎನ್ನುವಂತೆ ಆಗಿದೆ’ ಎಂದು ಸುದ್ದಿಗಾರರ ಜೊತೆ ಆರೋಪಿಸಿದರು. 

‘ರವೀಂದ್ರನಾಥ್ ನನಗೆ ಹಳೆಯ ಪರಿಚಯ. ಸಂಬಂಧಿಕರು, ನನಗೆ ಅಣ್ಣ ಆಗಬೇಕು. ಅವರು ಚೌಕಿಪೇಟೆಯಲ್ಲಿ ಅಂಗಡಿ ಇಟ್ಟಿದ್ದಾಗ ನಾವೂ ಅವರ ಅಂಗಡಿಗೆ ಹೋಗುತ್ತಿದ್ದೆವು. ಅವರು ಒಬ್ಬರೇ ಹೋರಾಟ ಮಾಡಿಕೊಂಡು ಬರುತ್ತಿದ್ದರು. ಅಂದಿನಿಂದಲೂ ಅವರನ್ನು ನಾನು ಬಲ್ಲೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರೂ ಸಂಬಂಧಿಕರು, ಆದರೆ ರವೀಂದ್ರನಾಥ್‌ಗೂ ಇವರಿಗೂ ಬಹಳ ವ್ಯತ್ಯಾಸ ಇದೆ. ರವೀಂದ್ರನಾಥ್ ತೂಕಾನೇ ಬೇರೆ. ಅವರು ಆರೋಗ್ಯ ಸರಿ ಇಲ್ಲದಿದ್ದರೂ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಗೌರವ ಇದೆ.  ರವೀಂದ್ರನಾಥ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ ಅದಕ್ಕೇನು ಅರ್ಥ’ ಎಂದು ಪ್ರಶ್ನಿಸಿದರು.

‘ರೇಣುಕಾಚಾರ್ಯ ಇದೇ ಮೊದಲ ಬಾರಿಗೆ ನನ್ನನ್ನು ಮಾತನಾಡಿಸಿದ್ದು. ಮನೆಗೆ ಬಂದವರನ್ನು ಬರಬೇಡ, ಮಾತನಾಡಿಸಬೇಡ ಎಂದು ಹೇಳಲು ಆಗದು. ಅವರ ಪಕ್ಷದಲ್ಲಿ ಏನೇನೂ ಇದೆಯೋ ನನಗೆ ಗೊತ್ತಿಲ್ಲ. ನನ್ನ ಜೊತೆ ಯಾವ ಮಾಜಿ ಶಾಸಕರು ಸಹ ಸಂಪರ್ಕದಲ್ಲಿ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT