ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜೈನ ಮಂದಿರದಲ್ಲಿ ಕೋವಿಡ್ ಸೆಂಟರ್

Last Updated 5 ಮೇ 2021, 2:50 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಬಂದಾಗ ಬೆಡ್‌, ಆಮ್ಲಜನಕ ಸಮಸ್ಯೆ ಉಂಟಾಗದಂತೆ ತಡೆಯಲು ಜೈನ ಸಮುದಾಯವು ಜೈನ ದೇವಸ್ಥಾನದಲ್ಲಿಯೇ ಜೈನ್‌ ಕೋವಿಡ್‌ ಕೇರ್‌ ಸೆಂಟರ್‌ ಮಾಡಿದೆ.

ಆವರಗೆರೆಯಲ್ಲಿರುವ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಸ್ಥಾನದ ಆವರಣದಲ್ಲಿ ಈ ಕೇಂದ್ರ ಇರಲಿದೆ. ಒಟ್ಟು 67 ಬೆಡ್‌ಗಳಿದ್ದು, ಅದರಲ್ಲಿ ಮೂರು ಆಕ್ಸಿಜನ್‌ ಬೆಡ್‌ಗಳಾಗಿವೆ. ಅಕ್ಸಿಮೀಟರ್‌ ಇದೆ. ಇಬ್ಬರು ವೈದ್ಯರು, ನಾಲ್ವರು ನರ್ಸ್‌ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪಕ ನರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕಳೆದ ಬಾರಿಯೂ 100 ಬೆಡ್‌ಗಳ ವ್ಯವಸ್ಥೆ ಮಾಡಿದ್ದೆವು. ಜೈನ ಸಮುದಾಯದ ಯಾರಿಗೇ ಸೋಂಕು ಬಂದರೂ ಚಿಕಿತ್ಸೆ ಪಡೆಯಲು ಸುಲಭವಾಗಲಿ ಎಂದು ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ’ ಎಂದು ಸಮುದಾಯದ ಮುಖಂಡ ಗೌತಮ್‌ ಜೈನ್‌ ವಿವರ ನೀಡಿದ್ದಾರೆ.

ಪ್ರತಿ ಸಮುದಾಯಗಳು ತಮ್ಮ ಆರಾಧನಾ ಕೇಂದ್ರಗಳಲ್ಲಿ ಈ ರೀತಿ ಕೋವಿಡ್‌ ಕೇರ್‌ ಸೆಂಟರ್‌ ಮಾಡಿದರೆ ಆಸ್ಪತ್ರೆಗಳಲ್ಲಿ ಉಂಟಾಗುವ ಒತ್ತಡವನ್ನು ತಪ್ಪಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT