ದಾವಣಗೆರೆ: ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ) ಉಲ್ಲಂಘಿಸಿದ ವ್ಯಾಪಾರಿಗಳು ಹಾಗೂ ಗ್ರಾಹಕರ ವಿರುದ್ಧ ಮಹಾನಗರ ಪಾಲಿಕೆಯ ಅಧಿಕಾರಿಗಳು ದಾಳಿ ನಡೆಸಿ, ವಿಧಿಸುವ ದಂಡದ ಪ್ರಮಾಣ ವರ್ಷದಿಂದ ವರ್ಷಕ್ಕೆ ಸಹಜವಾಗಿ ಏರಿಕೆಯಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ 2025ರಲ್ಲಿ ನಡೆಸಿದ ದಾಳಿ ಹಾಗೂ ವಿಧಿಸಿದ ದಂಡದ ಪ್ರಮಾಣ ಇಳಿಕೆಯಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕೋಟ್ಪಾ ಉಲ್ಲಂಘಿಸಿದ ವ್ಯಾಪಾರಿಗಳು ಹಾಗೂ ಗ್ರಾಹಕರ ವಿರುದ್ಧ 2024ರಲ್ಲಿ 260 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು ₹ 71,500 ದಂಡ ವಿಧಿಸಲಾಗಿತ್ತು. ಆದರೆ, 2025ರಲ್ಲಿ 252 ಪ್ರಕರಣಗಳನ್ನು ದಾಖಲಿಸಿಕೊಂಡು ₹ 65,400 ದಂಡ ವಿಧಿಸಲಾಗಿದೆ.

ನವೆಂಬರ್ನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು (58) ದಾಖಲಿಸಿ ₹ 14,900 ದಂಡ ವಿಧಿಸಲಾಗಿದೆ. ಉಳಿದಂತೆ ಸೆಪ್ಟೆಂಬರ್ನಲ್ಲಿ 54 ಪ್ರಕರಣ (₹ 13,800), ಆಗಸ್ಟ್ನಲ್ಲಿ 39 ಪ್ರಕರಣ (₹ 9,900), ಜುಲೈನಲ್ಲಿ 22 ಪ್ರಕರಣ (₹ 6,200) ದಾಖಲಿಸಿಕೊಳ್ಳಲಾಗಿದೆ. ಇನ್ನುಳಿದ ತಿಂಗಳುಗಳಲ್ಲಿ 20ಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಅತೀ ಕಡಿಮೆ ಅಂದರೆ ಕೇವಲ ತಲಾ 4 ಪ್ರಕರಣಗಳನ್ನು ದಾಖಲಿಸಿ ತಲಾ ₹ 2,000 ಕ್ಕಿಂತ ಕಡಿಮೆ ದಂಡ ವಿಧಿಸಲಾಗಿದೆ.

‘ಈ ಹಿಂದಿನ ವರ್ಷಗಳಲ್ಲಿ ದಾಳಿ ಹಾಗೂ ದಂಡದ ಮೊತ್ತ ಏರುಮುಖದಲ್ಲೇ ಇತ್ತು. ಆದರೆ, ಸರ್ಕಾರದ ವಿವಿಧ ಯೋಜನೆಗಳ ಕಾರ್ಯರೂಪಕ್ಕೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸಿದ್ದರಿಂದ 2025ರಲ್ಲಿ ಕೋಟ್ಪಾ ಉಲ್ಲಂಘಿಸುವವರ ವಿರುದ್ಧ ನಡೆಸಿದ ದಾಳಿ ಹಾಗೂ ದಂಡದ ಮೊತ್ತದಲ್ಲಿ ಇಳಿಕೆ ಕಂಡಿದೆ’ ಎನ್ನುತ್ತವೆ ಪಾಲಿಕೆಯ ಮೂಲಗಳು.

ಕಾಯ್ದೆ ಉಲ್ಲಂಘನೆ ನಿರಂತರ:

ನಗರದ ವಿವಿಧೆಡೆ ಕೋಟ್ಪಾ ಉಲ್ಲಂಘನೆಯು ನಿರಾತಂಕವಾಗಿ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಾಲೆ– ಕಾಲೇಜುಗಳ ಆವರಣದ ಸಮೀಪದಲ್ಲೇ ತಂಬಾಕು ಉತ್ಪನ್ನಗಳ ಮಾರಾಟ ಎಗ್ಗಿಲ್ಲದೇ ಮುಂದುವರಿದಿದೆ. ಹಲವು ಕಡೆ ಚಹದ ಅಂಗಡಿಗಳಲ್ಲೇ ಬೀಡಿ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

‘ದಾವಣಗೆರೆಯ ಎಸ್ಪಿಎಸ್ ನಗರ 2ನೇ ಹಂತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಿರುವ ಅಂಗಡಿಯೊಂದರಲ್ಲಿ ಬೀಡಿ, ಸಿಗರೇಟ್ ಮಾರಲಾಗುತ್ತಿದೆ. ಎಸ್ಪಿಎಸ್ ನಗರದ 1ನೇ ಹಂತದ ಸರ್ಕಾರಿ ಪ್ರೌಢಶಾಲೆ ಹತ್ತಿರದಲ್ಲೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ’ ಎನ್ನುತ್ತಾರೆ ‘ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ’ಯ ಮುಖಂಡ ಎಂ.ಲಿಂಗರಾಜ್.

‘ದೊಡ್ಡ ಬೂದಿಹಾಳ್ ರಸ್ತೆಯ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿ ನಿಲಯದ ಹತ್ತಿರದಲ್ಲೇ ಬಾರ್ ಇದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ಅಂಗಡಿಗಳೂ ಇವೆ. ಈ ಬಗ್ಗೆ ಎಸ್ಸಿ–ಎಸ್ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಗಮನಕ್ಕೂ ತರಲಾಗಿದೆ’ ಎಂದು ಅವರು ಹೇಳಿದರು.

ಸಿಗರೇಟು, ಬೀಡಿ, ಪೈಪ್ ತಂಬಾಕು, ಹುಕ್ಕಾ ತಂಬಾಕು, ಅಗಿಯುವ ತಂಬಾಕು, ನಶ್ಯ, ಗುಟ್ಕಾ, ಪಾನ್ ಮಸಾಲಾ ಹಾಗೂ ತಂಬಾಕಿನ ಘಟಕಾಂಶಗಳನ್ನು ಹೊಂದಿರುವ ಇತರೆ ತಂಬಾಕು ಪದಾರ್ಥಗಳನ್ನು ಕಾಯ್ದೆಯಡಿ ಸೇರಿಸಲಾಗಿದೆ. ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಶಾಲೆ– ಕಾಲೇಜುಗಳ ಆವರಣದಿಂದ 100 ಮೀಟರ್ ಒಳಗಡೆ ತಂಬಾಕು ಉತ್ಪನ್ನ ಮಾರುವಂತಿಲ್ಲ. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಕೊಡಬಾರದು.

ತಂಬಾಕು ಉತ್ಪನ್ನಗಳ ಮಾರಾಟಕ್ಕೆ ದಾವಣಗೆರೆ ಮಹಾನಗರ ಪಾಲಿಕೆಯಿಂದ ಪರವಾನಗಿ (ಲೈಸೆನ್ಸ್) ಪಡೆಯುವುದೂ ಕಡ್ಡಾಯವಾಗಿದೆ.

ವಿವಿಧ ಕಾರ್ಯಗಳಿಗೆ ಸಿಬ್ಬಂದಿ ನಿಯೋಜನೆ’

‘ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಕಂದಾಯ ವಸೂಲಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ 2025ರಲ್ಲಿ ಅಧಿಕ ದಾಳಿ ನಡೆಸಿ ದಂಡ ವಿಧಿಸಲು ಸಾಧ್ಯವಾಗಿಲ್ಲ’ ಎಂದು ಆರೋಗ್ಯ ನಿರೀಕ್ಷಕಿ ಮಲ್ಲಿಕಾ ಹೇಳಿದರು. ‘ಶಾಲೆ– ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದೇವೆ. ಸಾರ್ವಜನಿಕರಲ್ಲೂ ಕೋಟ್ಪಾ ಉಲ್ಲಂಘಿಸದಂತೆ ಅರಿವು ಮೂಡಿಸಲಾಗುತ್ತಿದೆ’ ಎಂದರು.