ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಾಲಕ, ಮೂವರು ವೃದ್ಧೆಯರಿಗೆ ಕೋವಿಡ್-19

Last Updated 29 ಮೇ 2020, 8:24 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಒಬ್ಬ ಬಾಲಕ ಹಾಗೂ ಮೂವರು ವೃದ್ಧೆಯರಿಗೆ ಕೋವಿಡ್-19 ರೋಗ ಇರುವುದು ಶುಕ್ರವಾರ ದೃಢಪಟ್ಟಿದೆ.

ತರಳಬಾಳು ಬಡಾವಣೆಯ 47 ವರ್ಷದ ಮಹಿಳೆ (ಪಿ-2208) ಸಂಪರ್ಕದಿಂದ ಸ್ಥಳೀಯರಾದ 65 ವರ್ಷದ ವೃದ್ಧೆ (ಪಿ-2557) ಹಾಗೂ 68 ವರ್ಷದ ವೃದ್ಧೆಗೆ (ಪಿ-2558) ಕೊರೊನಾ ಸೋಂಕು ತಗುಲಿದೆ. ಜಾಲಿನಗರ ಕಂಟೈನ್‌ಮೆಂಟ್‌ ವಲಯದ ಎಂಟು ವರ್ಷದ ಬಾಲಕನಿಗೂ(ಪಿ-2559) ಸೋಂಕು ಅಂಟಿಕೊಂಡಿದೆ.

ಬಸವರಾಜಪೇಟೆಯ 68 ವರ್ಷದ ವೃದ್ಧೆಯಲ್ಲೂ (ಪಿ-2560) ಸೋಂಕು ಕಾಣಿಸಿಕೊಂಡಿದೆ. ಶೀತಜ್ವರದಿಂದ (ILI) ಬಳಲುತ್ತಿದ್ದರಿಂದ ಇವರ ಗಂಟಲಿನ ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಿಗೂ ಸೋಂಕು ತಗುಲಿರುವುದು ಶುಕ್ರವಾರ ಬಂದ ವರದಿ ಖಚಿತಪಡಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 146 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ನಾಲ್ವರು ಈ ರೋಗದಿಂದ ಮೃತಪಟ್ಟಿದ್ದಾರೆ. ಒಟ್ಟು 79 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 63 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT