ದಾವಣಗೆರೆ: ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳುತ್ತಿದ್ದಂತೆ ನಗರ ಮತ್ತೆ ರಂಗು ಪಡೆದುಕೊಂಡಿದೆ. ಮಂಗಳವಾರ ರಾತ್ರಿ ಕಾಮದಹನ ನಡೆಸಿದ ಜನರು ಬಣ್ಣಗಳನ್ನು ಎರಚಲು ಸಿದ್ಧರಾಗಿದ್ದಾರೆ. ಬುಧವಾರ ನಡೆಯಲಿರುವ ಹೋಳಿ ಹಬ್ಬಕ್ಕೆ ಇಡೀ ನಗರ ಸಜ್ಜಾಗಿದೆ.

ಹೋಳಿಯ ಪ್ರಮುಖ ಆಕರ್ಷಣೆಯಾಗಿರುವ ‘ರಾಮ್ ಅಂಡ್ ಕೋ’ ವೃತ್ತ ಬಣ್ಣದ ಬಟ್ಟೆಗಳಿಂದ ಕಂಗೊಳಿಸುತ್ತಿದೆ. ವಿದ್ಯುತ್ ದೀಪಾಲಂಕಾರದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಹೋಳಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

‘ರಾಮ್ ಅಂಡ್ ಕೋ’ ವೃತ್ತವೂ ಸೇರಿದಂತೆ ನಗರದ ಹಲವೆಡೆ ಮಂಗಳವಾರ ರಾತ್ರಿ ಕಾಮದಹನ ನಡೆಸಲಾಯಿತು. ಕಟ್ಟಿಗೆ, ಬೆರಣಿ ಸೇರಿದಂತೆ ಇತರ ಸಾಮಗ್ರಿಗಳನ್ನು ಸೇರಿಸಿ ಕಾಮದಹನ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಕಾಮದಹನ ಮಾಡುತ್ತಿದ್ದಂತೆ ಕೇಕೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಳೆ ದಾವಣಗೆರೆ, ನಿಟುವಳ್ಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಕಾಮದಹನ ನಡೆಸಲಾಯಿತು.

ರಂಗು ಪಡೆದ ವೃತ್ತ:

ಹೋಳಿ ಹಬ್ಬಕ್ಕೆ ನಗರದ ‘ರಾಮ್ ಅಂಡ್ ಕೋ’ ವೃತ್ತ ಸಕಲ ರೀತಿಯಲ್ಲಿ ಸಿದ್ಧವಾಗಿದೆ. ತರಹೇವಾರಿ ಬಣ್ಣದ ಬಟ್ಟೆಗಳನ್ನು ಆಕರ್ಷಕವಾಗಿ ಕಟ್ಟಲಾಗಿದೆ. ವೃತ್ತವನ್ನು ಸಂಪರ್ಕಿಸುವ ನಾಲ್ಕು ದಿಕ್ಕಿನ ರಸ್ತೆಗಳನ್ನು ಸಿಂಗರಿಸಲಾಗಿದೆ. ವೃತ್ತದ ಮಧ್ಯೆ ಬಿಲ್ಲು, ಹೂಬಾಣ ಹಿಡಿದ ಮನ್ಮಥನ ಚಿತ್ರ ಗಮನ ಸೆಳೆಯುತ್ತಿದೆ. ಬೇಸಿಗೆ ಬಿಸಿಲು ಹೆಚ್ಚುತ್ತಿರುವುದರಿಂದ ನೆರಳಿನ ವ್ಯವಸ್ಥೆಯನ್ನು ‘ರಾಂ ಆ್ಯಂಡ್ ಕೋ’ ಗೆಳೆಯರ ಬಳಗ ಮಾಡಿದೆ.

ಬಣ್ಣ ಎರಚಿ ಸಂಭ್ರಮಿಸುವ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವೃತ್ತದ ಮೇಲ್ಭಾಗದಲ್ಲಿ ಅನಗತ್ಯವಾಗಿದ್ದ ವಿದ್ಯುತ್ ಹಾಗೂ ಕೇಬಲ್ ವೈರುಗಳನ್ನು ತೆರವುಗೊಳಿಸಲಾಗಿದೆ. ವೃತ್ತದ ಒಂದು ಭಾಗದಲ್ಲಿ ಸೆಲ್ಫಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ರಂಗು ರಂಗಿನ ಬಣ್ಣಗಳ ನಡುವೆ ಸಂಗೀತದ ಅಬ್ಬರವೂ ಕೇಳುವ ಸಾಧ್ಯತೆ ಇದೆ. ಗಣೇಶ ಉತ್ಸವದಲ್ಲಿ ನಿರ್ಬಂಧಿಸಲಾಗಿದ್ದ ಡಿ.ಜೆಗಳು ಹೋಳಿಯಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ.

ಬಣ್ಣದ ಖರೀದಿ ಜೋರು:

ಹೋಳಿ ಹಬ್ಬಕ್ಕೆ ನಗರದಲ್ಲಿ ಮಂಗಳವಾರ ಖರೀದಿ ಪ್ರಕ್ರಿಯೆ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಹರ್ಬಲ್ ಪೌಡರ್ಗಳೂ ಸೇರಿದಂತೆ ವಿವಿಧ ಬಣ್ಣದ ಪುಡಿಗಳನ್ನು ಜನರು ಖರೀದಿಸಿದರು. ಮಕ್ಕಳ ಸಂಭ್ರಮ ಹೆಚ್ಚಿಸುವ ಬಣ್ಣದ ಗನ್ಗಳು, ಪಿಚಕಾರಿ, ಬಣ್ಣದ ಪುಡಿಗಳ ಮಾರಾಟ ಹೆಚ್ಚಾಗಿತ್ತು.

ಬುಧವಾರ ನಸುಕಿನಿಂದಲೇ ಹೋಳಿ ಹಬ್ಬ ಶುರುವಾಗಲಿದೆ. ಬೆಳಿಗ್ಗೆ ಮನೆ, ಬೀದಿಗಳಲ್ಲಿ ಬಣ್ಣ ಹಚ್ಚಿ ಸಂಭ್ರಮಿಸುವ ಜನರು ಬಳಿಕ ‘ರಾಮ್ ಅಂಡ್ ಕೋ’ ವೃತ್ತದತ್ತ ಬರಲಿದ್ದಾರೆ. ನಗರದ ಎಂಸಿಸಿ ‘ಬಿ’ ಬ್ಲಾಕ್ನ 7ನೇ ಮುಖ್ಯ ರಸ್ತೆ, ರಿಂಗ್ ರಸ್ತೆ ಸೇರಿದಂತೆ ಅಲ್ಲಲ್ಲಿ ಹೋಳಿ ಹಬ್ಬಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.