ಬುಧವಾರ, ಆಗಸ್ಟ್ 4, 2021
20 °C
ಮಾರ್ಗಸೂಚಿ ಪಾಲಿಸಲು ಬದ್ಧ l ಜಿಮ್ ತೆರೆಯಲು ಅವಕಾಶ ನೀಡಿ

ದಾವಣಗೆರೆ: ಸಂಕಷ್ಟದಲ್ಲಿ ಜಿಮ್ ತರಬೇತುದಾರರು

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜನರ ದೈಹಿಕ ಕ್ಷಮತೆ ಹೆಚ್ಚಿಸುವ ಜಿಮ್‌ ಸೆಂಟರ್‌ಗಳು ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳಿನಿಂದ ಮುಚ್ಚಿದ್ದು, ಇದರಿಂದಾಗಿ ಜಿಮ್‌ ತರಬೇತುದಾರರು ಹಾಗೂ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ಜಿಮ್‌ಗಳ ಬಾಡಿಗೆ, ವಿದ್ಯುತ್ ಬಿಲ್, ಬ್ಯಾಂಕ್‌ ಸಾಲ ತೀರಿಸಲು ಆಗದೇ ತೊಂದರೆಗೀಡಾಗಿದ್ದಾರೆ. ಸರ್ಕಾರದಿಂದ ಯಾವುದೇ ಆದೇಶ ಬಾರದೇ ಇರುವುದು ಇವರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.

ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಜಿಮ್‌ಗಳು ಇದ್ದು, 80 ಸಾವಿರಕ್ಕೂ ತರಬೇತುದಾರರು ಇದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 313 ಜಿಮ್‌ಗಳು ನೋಂದಣಿಯಾಗಿವೆ. ಕೆಲವು ನುರಿತ ತರಬೇತುದಾರರು ಅಪಾರ್ಟ್‌ಮೆಂಟ್‌ಗಳಲ್ಲಿ ಹೇಳಿಕೊಡುತ್ತಾರೆ. ಮತ್ತೆ ಕೆಲವರು ಕಮ್ಯುನಿಟಿ ಸೆಂಟರ್‌ಗಳು, ಅಪಾರ್ಟ್‌ಮೆಂಟ್‌ ಹಾಗೂ ಮನೆಗಳಿಗೆ ಹೋಗಿ ವ್ಯಾಯಾಮ ಹೇಳಿಕೊಡುತ್ತಾರೆ. ಈಗ ಅವರಿಗೆ ಯಾವುದೇ ಕೆಲಸವಿಲ್ಲದಂತಾಗಿದೆ’ ಎನ್ನುತ್ತಾರೆ ಕರ್ನಾಟಕ ದೇಹದಾರ್ಢ್ಯ ಹವ್ಯಾಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್‌.ರಘುನಂದನ್.

‘ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಯಾವುದೇ ಸ್ಪರ್ಧೆಗಳು ನಡೆದಿಲ್ಲ. ಜಿಮ್‌ಗೆ ಬೇಕಾದ ಸಲಕರಣೆಗಳು, ಆಹಾರ ಯಾವುದೇ ಮಾರಾಟವಾಗಿಲ್ಲ. ಇದರಿಂದಾಗಿ ₹600ರಿಂದ ₹700 ಕೋಟಿ ನಷ್ಟವಾಗಿದೆ’ ಎನ್ನುತ್ತಾರೆ ಆರ್‌.ರಘುನಂದನ್.

‘ಅಸಂಘಟಿತ ವಲಯವಾದ್ದರಿಂದ ಜಿಮ್‌ಗಳಿಗೆ ಬ್ಯಾಂಕ್‌ನಲ್ಲಿ ಸಾಲವೂ ಮಂಜೂರಾಗುವುದಿಲ್ಲ. ಕೆಲವರು ಬೇರೆ ಕಡೆಯಿಂದ ಸಾಲ ತಂದು ಜಿಮ್ ಆರಂಭಿಸಿದ್ದಾರೆ. ಈಗ ಸಾಲದ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ಜಿಮ್ ಸಲಕರಣೆಗಳಿಂದ ಸರ್ಕಾರಕ್ಕೆ ಜಿಎಸ್‌ಟಿ ಹೋಗುತ್ತದೆ. ಇದರಿಂದ ಸರ್ಕಾರಕ್ಕೆ ಆದಾಯವೂ ಬರುತ್ತದೆ. ಸಲೂನ್ ಆರಂಭಿಸಲು ಅನುಮತಿ ಕೊಟ್ಟ ಮೇಲೆ ನಮಗೂ ಅನುಮತಿ ಕೊಡಬಹುದಲ್ಲವೇ’ ಎಂಬು ರಘುನಂದನ್ ಅವರ ಪ್ರಶ್ನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು