ಭಾನುವಾರ, ಜುಲೈ 3, 2022
27 °C

ರಸಮಂಜರಿ ಕಾರ್ಯಕ್ರಮಕ್ಕೆ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ರಸಸಂಜೆ ವೀಕ್ಷಿಸಲು ಸಂಗೀತ ಪ್ರಿಯರ ಪ್ರವಾಹವೇ ಹರಿದು ಬಂದಿತ್ತು.

ಶಾಸಕ ಎಸ್.ವಿ. ರಾಮಚಂದ್ರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಚಂದನ್ ಶೆಟ್ಟಿ, ಗಾಯಕರಾದ ಅನುರಾಧಾ ಭಟ್ ಹಾಗೂ ಮಂಜುನಾಥ್ ಅವರ ತಂಡ ಪ್ರಸ್ತುತಪಡಿಸಿದ ಜನಪ್ರಿಯ ಹಾಡುಗಳು ಹಾಗೂ ನೃತ್ಯವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದರು. ಪಟ್ಟಣದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಾಕಲಾಗಿದ್ದ, 15 ಸಾವಿರ ಆಸನಗಳನ್ನು ಒಳಗೊಂಡ ವೈಭವೋಪೇತ ವೇದಿಕೆಯಲ್ಲಿ ಗಂಧರ್ವ ಈವೆಂಟ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ
ನೂರಕ್ಕೂ ಹೆಚ್ಚು ಕಲಾವಿದರು, ಗಾಯಕರು,‌ ನೃತ್ಯಪಟುಗಳು ನಾಲ್ಕು ತಾಸುಗಳ ಕಾಲ ನೀಡಿದ ಕಾರ್ಯಕ್ರಮವನ್ನು ಕೊನೆಯವರೆಗೂ ಪ್ರೇಕ್ಷಕರು ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು