ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಪಶು ವೈದ್ಯರಿಗೆ ಹೆಚ್ಚಿದ ಅವಕಾಶ

‘ಪಶು ವೈದ್ಯರಿಗೆ ತಾಂತ್ರಿಕ ವಿಚಾರ ಸಂಕಿರಣ’ದಲ್ಲಿ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್ ಅಭಿಮತ
Published : 3 ಜೂನ್ 2023, 12:16 IST
Last Updated : 3 ಜೂನ್ 2023, 12:16 IST
ಫಾಲೋ ಮಾಡಿ
Comments

ದಾವಣಗೆರೆ: ಸದ್ಯದ ದಿನಮಾನಗಳಲ್ಲಿ ಪಶು ವೈದ್ಯರಿಗೆ ಹೆಚ್ಚಿನ ಅವಕಾಶಗಳು ಒದಗಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್ ಅಭಿಪ್ರಾಯಪಟ್ಟರು.

ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಅಂಗವಾಗಿ ಶನಿವಾರ ಪ್ರಾಣಿ ದಯಾ ಸಂಘ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘದ ಸಹಯೋಗದಲ್ಲಿ ನಡೆದ ‘ಪಶು ವೈದ್ಯರಿಗೆ ತಾಂತ್ರಿಕ ವಿಚಾರ ಸಂಕಿರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪಶು ವೈದ್ಯರಾಗಿದ್ದವರು ಉತ್ತಮ ಆಡಳಿತಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳಿಗೂ ಉತ್ತಮ ಹೆಸರು ತರುತ್ತಿರುವುದು ಅಭಿನಂದನಾರ್ಹ’ ಎಂದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹೆಚ್ಚುವರಿ ನಿರ್ದೇಶಕ (ವಿಸ್ತರಣೆ, ತರಬೇತಿ ಶಿಕ್ಷಣ ಮತ್ತು ಆರ್‌ಕೆವಿವೈ) ಡಾ.ಜಯಣ್ಣ ಎಚ್‌.ಎಸ್‌. ಮಾತನಾಡಿ, ‘ಪಶು ವೈದ್ಯರಿಗೆ ವೃತ್ತಿ ಕೀಳರಿಮೆ ಇರಬಾರದು, ಬದಲಾಗಿ ಹೆಮ್ಮೆ ಇರಬೇಕು. ಈ ವೃತ್ತಿ ಯಾವ ಉದ್ಯೋಗಕ್ಕೂ ಕಡಿಮೆ ಇಲ್ಲ’ ಎಂದರು.

ಈ ಹಿಂದೆ ಪಶು ವೈದ್ಯರಾಗಿ ಸೇವೆ ಸಲ್ಲಿಸಿದ್ದ ಚನ್ನಗಿರಿ ವಲಯದ ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂತೋಷ್ ಕೆ.ಎಂ., ದಾವಣಗೆರೆ ತಹಶೀಲ್ದಾರ್ ಡಾ.ಅಶ್ವಥ್ ಎಂ.ಬಿ., ಚನ್ನಗಿರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್ 1) ಡಾ.ಮಲ್ಲಿಕಾರ್ಜುನ್ ಜಿ., ಭದ್ರಾವತಿ ಎಪಿಎಂಸಿ ಸಹಾಯಕ ನಿರ್ದೇಶಕ ಡಾ.ಆದರ್ಶ್ ಡಿ.ಬಿ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ನಂತರ ಡಾ.ಬಾಬಾ ಬುಡೆನ್‌ ಅವರು ‘ಪ್ರಾಣಿ ಜನ್ಯ ರೋಗ’ಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರಮುಖರಾದ ಡಾ.ರಾಮ್‌ಪ್ರಸಾದ್ ಕುಲಕರ್ಣಿ ಸೇರಿದಂತೆ ಪಶು ವೈದ್ಯರು, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಡಾ.ಬಾಲರಾಜು ಬಿ.ಎಲ್‌. ನಿರೂಪಿಸಿದರು. ಡಾ.ಅನಿಲ್ ಕೆ.ಯು. ಸ್ವಾಗತಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್‌ ಅವರು ಇಲಾಖೆಯ ಆವರಣದಲ್ಲಿರುವ ನವೀಕರಿಸಿದ ಪಶುವೈದ್ಯಕೀಯ ಸಂಘದ ಕಟ್ಟಡವನ್ನು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT