ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಶಿಕ್ಷಕಿಯಿಂದ ವಿದ್ಯಾರ್ಥಿಗಳ ಹೆಸರಿನಲ್ಲಿ ಠೇವಣಿ

Last Updated 21 ಮಾರ್ಚ್ 2022, 5:48 IST
ಅಕ್ಷರ ಗಾತ್ರ

ಮಲ್ಲಿಗೇನಹಳ್ಳಿ (ನ್ಯಾಮತಿ): ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಮುಖ್ಯಶಿಕ್ಷಕಿಯೊಬ್ಬರು ಪೋಷಕರನ್ನು ಪ್ರೇರೇಪಿಸಲು ವಿನೂತನವಾಗಿ ಶ್ರಮಿಸುತ್ತಿದ್ದಾರೆ.

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸರ್ವಮಂಗಳಾ ಅವರು ಒಂದನೇ ತರಗತಿಗೆ ದಾಖಲಾದ 20 ಮಕ್ಕಳ ಹೆಸರಿನಲ್ಲಿ ತಲಾ ₹ 1 ಸಾವಿರವನ್ನು 5 ವರ್ಷದ ಅವಧಿಗೆ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ಮಗು ಶಾಲೆಯಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗುವ ಸಮಯದಲ್ಲಿ ಠೇವಣಿ ಮೊತ್ತ ಅವರ ಕೈಸೇರುವಂತೆ ಮಾಡಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಪೋಷಕರನ್ನು ಉತ್ತೇಜಿಸುತ್ತಿದ್ದಾರೆ. ಸಂಬಂಧಿಸಿದ ಠೇವಣಿಪತ್ರವನ್ನು ಮಕ್ಕಳಿಗೆ ಶನಿವಾರ ವಿತರಿಸಿದರು.

ಜಿಲ್ಲಾ ಅಕ್ಷರ ದಾಸೋಹ ಮೇಲ್ವಿಚಾರಕಿ ಡಾ.ಪುಷ್ಪಲತಾ, ತಾಲ್ಲೂಕು ಅಧಿಕಾರಿ ಕೆ.ರುದ್ರಪ್ಪ, ಸಿಆರ್‌ಪಿ ಡಿ.ನಾಗೇಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಹರೀಶಗೌಡ, ಸಹ ಶಿಕ್ಷಕರಾದ ಮಂಜುಳಾ, ಅನಿತಾ, ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಿ. ಕುಬೇರಪ್ಪ ಹಾಗೂ ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT