ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಹಚ್ಚಿ: ಎಸ್‌ಪಿ ಸಿ.ಬಿ.ರಿಷ್ಯಂತ್

Last Updated 5 ಫೆಬ್ರುವರಿ 2023, 5:42 IST
ಅಕ್ಷರ ಗಾತ್ರ

ದಾವಣಗೆರೆ: ‘ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂದು ಬಹಳ ಜನರು ನಂಬಿದ್ದಾರೆ. ಆದರೆ ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಅನ್ನು ಗುಣಪಡಿಸಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವ ಹಾಗೂ ವಿಶ್ವ ಕ್ಯಾನ್ಸರ್‌ ಜಾಗೃತಿ ದಿನಾಚರಣೆ ಅಂಗವಾಗಿ ಶನಿವಾರ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಆಯೋಜಿಸಿದ್ದ ‘ಕ್ಯಾನ್ಸರ್‌ ಜಾಗೃತಿ ಜಾಥಾ’ಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

‘ಬಹಳ ಜನರು ಕ್ಯಾನ್ಸರ್‌ ಗುಣಪಡಿಸಲಾಗದ ಕಾಯಿಲೆ ಎಂದು ನಂಬಿದ್ದಾರೆ. ಆದರೆ ಇದು ತಪ್ಪು. ಆರಂಭದಲ್ಲೇ ಗುರುತಿಸಿದರೆ ಕ್ಯಾನ್ಸರ್ ಗುಣಪಡಿಸಬಹುದು ಎಂದು ಹೇಳಿದರು.

‘ನಾವು ಆರೋಗ್ಯಕ್ಕೆ ಕೊಡಬೇಕಾದ ಪ್ರಾಮುಖ್ಯತೆ ನೀಡದೇ ಇರುವುದರಿಂದ ಕ್ಯಾನ್ಸರ್ ಬರುತ್ತಿದೆ. ಎಷ್ಟೋ ಜನರು ಕ್ಯಾನ್ಸರ್ ಅನ್ನು ಗೆದ್ದಿದ್ದಾರೆ. ಈ ಜಾಗೃತಿ ಎಲ್ಲರಿಗೂ ಬೇಕಾಗಿದೆ. ಪ್ರತಿಯೊಬ್ಬರಿಗೂ ಕ್ಯಾನ್ಸರ್ ಜಾಗೃತಿ ಇಂದಿನ ದಿನಗಳಲ್ಲಿ ಮುಖ್ಯ. ಎಲ್ಲರಿಗೂ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮಾತನಾಡಿ, ‘ಎಲ್ಲರೂ ಧ್ವನಿಗೂಡಿಸೋಣ ಕ್ರಮ ಕೈಗೊಳ್ಳೋಣ’ ಈ ವರ್ಷದ ಧ್ಯೇಯವಾಕ್ಯವಾಗಿದ್ದು, ಅದರಂತೆ ಎಲ್ಲರೂ ಧ್ವನಿಗೂಡಿಸೋಣ. ಕ್ಯಾನ್ಸರ್ ಅನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಬೇಕು. ಇಲ್ಲಿರುವ ನೀವೆಲ್ಲರೂ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಮಾತನಾಡಿ, ‘ಕ್ಯಾನ್ಸರ್ ಅಸಾಂಕ್ರಾಮಿಕ ರೋಗವಾಗಿದ್ದು, ಜಗತ್ತಿನಲ್ಲಿ ಸಂಭವಿಸುವ ಸಾವುಗಳಲ್ಲಿ ಹೃದಯಸಂಬಂಧಿ ರೋಗಗಳು ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕ್ಯಾನ್ಸರ್ ಸಂಬಂಧಿ ಕಾಯಿಲೆಗಳು ಇವೆ. ಕ್ಯಾನ್ಸರ್‌ಗಳಲ್ಲಿ ಗುಣಪಡಿಸಬಹುದಾದವುಗಳು ಇದ್ದು, ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಗೆ ಒಳಪಡಿಸಿದರೆ ಅದನ್ನು ಗುಣಪಡಿಸಬಹುದು. ಆದ್ದರಿಂದ ‘ಕ್ಯಾನ್ಸರ್ ಎಂದರೆ ಭಯ ಬೇಡ ಎಚ್ಚರಿಕೆ ಇರಲಿ’ ಎಂಬ ಸಂದೇಶದೊಂದಿಗೆ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ 30 ವರ್ಷಗಳಿಗಿಂತ ಮೇಲ್ಪಟ್ಟವರಲ್ಲಿ ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಕ್ಯಾನ್ಸರ್‌ನಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಬಹುದು’ ಎಂದು ಹೇಳಿದರು.

‘ಪ್ರಜಾವಾಣಿ’ ಬ್ಯೂರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಅವರು ಪ್ರಜಾವಾಣಿ ಬೆಳೆದುಬಂದ ದಾರಿಯನ್ನು ವಿವರಿಸಿದರು. ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಕ್ರಮ ಮಾಡಿದ್ದು, ಕ್ಯಾನ್ಸರ್‌ಗೆ ಭಯ ತೊಲಗಿಸಲು ಈ ಕಾರ್ಯಕ್ರಮ ಮಾಡಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದವರು: ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಷಣ್ಮುಖಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ್ ಪಟಗೆ, ಪಾಲಿಕೆ ಸದಸ್ಯ ಆರ್‌. ಪ್ರಸನ್ನಕುಮಾರ್, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌.ಬಿ. ಮುರುಗೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರೇಗೌಡ, ಯೋಗ ಒಕ್ಕೂಟದ ವಾಸುದೇವ ರಾಯ್ಕರ್, ಲೈಫ್‌ಲೈನ್‌ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್‌, ಬಸವರಾಜ್, ಇನಾಯತ್ ಉಲ್ಲಾ, ರೆಡ್‌ಕ್ರಾಸ್ ಸಂಸ್ಥೆಯ ಸಿದ್ದಣ್ಣ, ಸಾಗರ್, ರವೀಂದ್ರನಾಥ್, ರವಿ, ಡಾ.ವಸಂತರಾಜು, ಸಿದ್ಧಗಂಗಾ ಸಂಸ್ಥೆಯ ನಿರ್ದೇಶಕ ಡಾ.ಡಿ.ಎಸ್. ಜಯಂತ್ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಆಸ್ಪತ್ರೆಯ ಇಬ್ರಾಹಿಂ ನಾಗನಗೌಡ, ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಜಿಲ್ಲಾ ತೆರಿಗೆ ಸಲಹಾಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್, ಕುಂದವಾಡ ಕೆರೆ ವಾಯುವಿಹಾರ ಬಳಗದ ಅಧ್ಯಕ್ಷ ಜೆ.ಈಶ್ವರ್ ಸಿಂಗ್ ಕವಿತಾಳ, ಮುರುಳೀಧರ ಗುಪ್ತ, ಪಿ.ಸಿ. ರಾಮನಾಥ್, ಕೆ.ಎಚ್. ರಮೇಶ್, ಪ್ರಕಾಶ್ ಅಧಿಕಾರಿ, ಮಹಾಲಿಂಗೇಶ್, ಜಿ.ಎಸ್‌. ರಾಜಾರಾಂ, ಆಲೂರು ಜಯಣ್ಣ, ವಿದ್ಯಾನಗರದ ವಾಯುವಿಹಾರ ಬಳಗದ ಉಜ್ಜನಯ್ಯ ಇ.ಎಸ್. ಜಿ.ಆರ್. ಷಣ್ಮುಖಪ್ಪ, ಹಿರಿಯ ಕಲಾವಿದ ಮಹಾಲಿಂಗಪ್ಪ ಎ. ಬಾಪೂಜಿ ದೈಹಿಕ ಶಿಕ್ಷಣ ಕಾಲೇಜಿನ ಡಾ.ಎಂ.ಎಸ್. ರಾಜಕುಮಾರ್, ದಾವಣಗೆರೆ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ, ಎನ್‌ಎಸ್ಎಸ್ ಅಧಿಕಾರಿ ಅಶೋಕ್‌ಕುಮಾರ್ ಪಾಳೇದ, ಡಾ.ಸಂತೋಷ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿ. ವಿಜಯಕುಮಾರ್ ನಾಗನಾಳ, ಯಶೋದಾ, ಪ್ರತಿಭಾ, ಲೈಫ್‌ಲೈನ್ ರಕ್ತದಾನಿಗಳ ಸಮೂಹದ ಅನಿಲ್ ಬಾರಂಗಳ್, ಮಾಧವ ಪದಕಿ, ಗೋಪಾಲಕೃಷ್ಣ, ಪೃಥ್ವಿ ಬಾದಾಮಿ, ಶ್ರೀಕಾಂತ್ ಕೆ.ಎಂ., ರಾಘವೇಂದ್ರ ಚವ್ಹಾಣ್, ಸತೀಶ್ ಶೆಟ್ಟಿ, ಸುಬ್ರಹ್ಮಣ್ಯ, ಸ್ಮಾರ್ಟ್‌ಸಿಟಿ ಆಟೋ ಚಾಲಕರ ಸಂಘದ ಅಣ್ಣಪ್ಪಸ್ವಾಮಿ ಎಚ್., ಕೊಟ್ರೇಶ‍ಪ್ಪ ಎಸ್‌.ಎಂ., ಸದ್ದಾಂ ಹುಸೇನ್, ಗಂಗಪ್ಪ ಕೆ.ಜಿ, ದೀಪಕ್‌ ಜೈನ್, ಆನಂದ್‌ಕುಮಾರ್ ಜೈನ್, ಸಂಕಲ್ಪ ಸೇವಾ ಫೌಂಡೇಶನ್‌ನ ಮಹಾಂತೇಶ್‌, ಜ್ಯೋತಿ ಗ್ಯಾಸ್ ಏಜೆನ್ಸಿ ಮಾಲೀಕರಾದ ಆನಂದ್‌, ಮ್ಯಾರಥಾನ್ ಓಟಗಾರರಾದ ಮೊಹಮ್ಮದ್ ರಫಿ, ಅಣ್ಣಪ್ಪ ಕೆ.ಎಚ್., ಲಕ್ಷ್ಮಣರಾವ್ ಸೋಳಂಕಿ, ನಾಗರಾಜಪ್ಪ, ಗುರುಶಾಂತಪ್ಪ, ಡಾ.ಲಕ್ಷ್ಮಣ್ ಕೆ.ಎಂ. ಮೇಘರಾಜ್ ಯು., ‘ಪ್ರಜಾವಾಣಿ’ ಜಾಹೀರಾತು ವಿಭಾಗದ ಎಜೆಎಂ ದಿವಾಕರ್ ಡಿ., ಹಿರಿಯ ವ್ಯವಸ್ಥಾಪಕ ಪ್ರಮೋದ್‌ ಭಾಗವತ್‌, ಪ್ರಸರಣ ವಿಭಾಗದ ಪ್ರಕಾಶ್ ನಾಯಕ್, ಮುದ್ರಣ ವಿಭಾಗದ ವ್ಯವಸ್ಥಾಪಕ ಟಿ. ಮುರಳೀಧರ, ಪ್ರಸರಣ ವಿಭಾಗದ ಪ್ರತಿನಿಧಿಗಳಾದ ಭರತ್‌ ಬಿಡ್ಡಪ್ಪ, ಅಕೌಂಟೆಂಟ್‌ ವಿಭಾಗದ ಪಾಂಡುರಂಗ ಶೆಟ್ಟಿ ಪಾಲ್ಗೊಂಡಿದ್ದರು. ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸು ಕಂಡ ನಾಗಅರಸಮ್ಮ, ಶ್ವೇತಾ ಆರ್. ಗಾಂಧಿ, ಎಸ್.ಕೆ. ಜಯರುದ್ರಪ್ಪ ಇದ್ದರು.

=

ನಮ್ಮೊಂದಿಗೆ ಕೈಜೋಡಿಸಿದವರು

‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಜಾಥಾಕ್ಕೆ ವಿವಿಧ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಪ್ರೋತ್ಸಾಹಿಸಿದವು. ಅವುಗಳು ಇಂತಿವೆ.

ಸರ್‌ಎಂವಿ ಕಾಲೇಜು; ಸಿದ್ಧಗಂಗಾ ವಿದ್ಯಾಸಂಸ್ಥೆ; ಆರ್.ಜಿ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್; ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ; ಯುರೋ ಕಿಡ್ಸ್; ನಂಜಪ್ಪ ಆಸ್ಪತ್ರೆ; ಜೆಜೆಎಂ ವೈದ್ಯಕೀಯ ಕಾಲೇಜು; ಕಾಲೇಜ್ ಆಫ್ ಡೆಂಟಲ್ ಸೈನ್ಸ್; ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು; ಜಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ; ಜಿ.ಮಲ್ಲಿಕಾರ್ಜುನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಯುಬಿಡಿಟಿ; ವಿನ್ನರ್ ಕರಿಯರ್ ಅಕಾಡೆಮಿ; ರೋಟರಿ ಕ್ಲಬ್; ಐಎಂಎ; ಲೈಫ್‌ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ; ಸಮಗ್ರ ಕರ್ನಾಟಕ ಕಲ್ಯಾಣ ಅಭಿವೃದ್ಧಿ ಸಂಘ; ಫೋಟೊಗ್ರಾಫರ್ಸ್ ಅಸೋಸಿಯೇಷನ್; ಕುಂದವಾಡ ಕೆರೆ ವಾಯುವಿಹಾರಿಗಳ ಸಂಘ; ದಾವಣಗೆರೆ ವಿವಿ ಎನ್‌ಎಸ್‌ಎಸ್ ಘಟಕ; ವಿದ್ವತ್ ಕಾಲೇಜು; ಎಸ್‌ಬಿಸಿ ಕಾಲೇಜು; ಎ.ಆರ್.ಜಿ.ಕಾಲೇಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.

===

ತಾರೆಯರ ರಂಗು

ಕ್ಯಾನ್ಸರ್ ಅಭಿಯಾನದಲ್ಲಿ ಚಿತ್ರನಟರು ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ‘ದಿ’ ಸಿನಿಮಾ ಚಿತ್ರದ ‌ನಾಯಕ ಮತ್ತು ನಿರ್ದೇಶಕ ವಿನಯ್, ಕ್ಯಾಮೆರಾಮನ್‌ ಆಲೆನ್ ಭರತ್, ಶರಣ್, ನಾಗೇಂದ್ರ ಅರಸ್, ಸತೀಶ್, ಬಾಲು ಹಾಗೂ ಗಜೇಂದ್ರ ಒಂದೇ ಉಡುಗೆ ತೊಟ್ಟು ಗಮನ ಸೆಳೆದರು. ‘ಹೊಂದಿಸಿ ಬರೆಯಿರಿ’ ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ನಟರಾದ ನವೀನ್ ಶಂಕರ, ಪ್ರವೀಣ್ ತೇಜ್ ಹಾಗೂ ನಾಯಕಿ ಅರ್ಚನಾ ಜೋಯಿಸ್ ಜಾಥಾದಲ್ಲಿ ಭಾಗವಹಿಸಿ ಗಮನ ಸೆಳೆದರು. ‘ಡೈಮಂಡ್ ಕ್ರಾಸ್’ ಚಿತ್ರದ ರಜತ್ ಅಣ್ಣಪ್ಪ, ರಾಜು ರಾಯಣ್ಣ ಹಾಗೂ ‘ಪದವಿಪೂರ್ವ’ ಚಿತ್ರದ ನಾಯಕ ನಟ ಪೃಥ್ವಿ ಶಾಮನೂರು ಜಾಥಾಕ್ಕೆ ಮೆರುಗು ನೀಡಿದರು. ವಿದ್ಯಾರ್ಥಿಗಳು ಸೇರಿ ಹಲವರು ನಟ–ನಟಿಯರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಗಮನ ಸೆಳೆಯಿತು.

ಜಾಥಾದಲ್ಲಿ ಮುಂದೆ ಇದ್ದವರು

ಸಮಗ್ರ ಕರ್ನಾಟಕ ಕಲ್ಯಾಣ ಅಭಿವೃದ್ಧಿ ಸಂಘ, ಸ್ವಾಮಿ ವಿವೇಕಾನಂದ ವಿಕಲ ಚೇತನರ ಒಕ್ಕೂಟ ಹಾಗೂ ಕಿವುಡ ಮೂಗರ ಸಂಘಗಳು ಕ್ಯಾನ್ಸರ್‌ ಜಾಗೃತಿ ಜಾಥಾದಲ್ಲಿ ಮುಂಚೂಣಿ ಸಾಲಿನಲ್ಲಿ ಇದ್ದರು. ಸರ್ಕಾರದ ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಇವರು ಕ್ಯಾನ್ಸರ್ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಸಮಗ್ರ ಕರ್ನಾಟಕ ಕಲ್ಯಾಣ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗಭೂಷಣ್, ಸ್ವಾಮಿ ವಿವೇಕಾನಂದ ವಿಕಲ ಚೇತನರ ಒಕ್ಕೂಟದ ಶಿವರಾಜ್, ಕಿವುಡ ಮೂಗರ ಸಂಘದ ಹನುಮಂತಪ್ಪ ಸೇರಿ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT