ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯ ಇಬ್ಬರಲ್ಲಿ ಕಪ್ಪು ಶಿಲೀಂಧ್ರ ಪತ್ತೆ

Last Updated 31 ಜುಲೈ 2021, 6:47 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ಕಪ್ಪು ಶಿಲೀಂಧ್ರ ಇರುವುದು ಶುಕ್ರವಾರ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆ 124ಕ್ಕೇರಿದೆ. ಅದರಲ್ಲಿ ಇಲ್ಲಿವರೆಗೆ ಒಟ್ಟು 91 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 33 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾ ಆಸ್ಪತ್ರೆಯಲ್ಲಿ 83 ಪ್ರಕರಣ ದೃಢಪಟ್ಟಿದ್ದು, 61 ಮಂದಿ ಗುಣಮುಖರಾಗಿದ್ದಾ‌ರೆ. ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ 38 ಮಂದಿಯಲ್ಲಿ ಶಿಲೀಂಧ್ರ ಕಾಣಿಸಿಕೊಂಡಿದ್ದು, 27 ಮಂದಿ ಗುಣಮುಖರಾಗಿದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಎರಡು ಪ್ರಕರಣ ಹಾಗೂ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ಅವರು ಗುಣಮುಖರಾಗಿದ್ದಾರೆ.


ಅಂಕಿ ಅಂಶ
ಒಟ್ಟು ಪ್ರಕರಣಗಳು–50383
ಸಕ್ರಿಯ ಪ್ರಕರಣ–311
ಒಟ್ಟು ಗುಣಮುಖ–49485
ಒಟ್ಟು ಸಾವು–587
––
ಈ ದಿನದ ಏರಿಕೆ–4
ಗುಣಮುಖ–10
ಸಾವು–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT