ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಜ ಅರಸು ಪುಣ್ಯತಿಥಿ

Published 7 ಜೂನ್ 2023, 6:38 IST
Last Updated 7 ಜೂನ್ 2023, 6:38 IST
ಅಕ್ಷರ ಗಾತ್ರ

ದಾವಣಗೆರೆ: ಡಿ. ದೇವರಾಜ ಅರಸು ಅವರು ರಾಜ್ಯ ಕಂಡ ಜನಪ್ರಿಯ ಶ್ರೇಷ್ಠ ಮುಖ್ಯಮಂತ್ರಿ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ಸಮಿತಿ ಏರ್ಪಡಿಸಿದ್ದ ದೇವರಾಜ ಅರಸು ಅವರ 41ನೇ ಪುಣ್ಯ ತಿಥಿ ಸಮಾರಂಭದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

‘ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಸಮಸಮಾಜವನ್ನು ಕಟ್ಟಲು ಹಗಲಿರುಳು ಶ್ರಮಿಸಿದರು. ತಲೆಯ ಮೇಲೆ ಮಲ ಹೋರುವ ಹಾಗೂ ಜೀತ ಪದ್ಧತಿಯನ್ನು ಪ್ರಬಲ ಕಾನೂನು ಮಾಡುವ ಮೂಲಕ ರದ್ದುಗೊಳಿಸಿದರು. ಭೂ ಸುಧಾರಣೆ ಕಾಯ್ದೆ ರೂಪಿಸಿ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಕ ಕಾನೂನಿನ ಮೂಲಕ ಲಕ್ಷಾಂತರ ಬಡಗೇಣಿದಾರರಿಗೆ ಭೂಮಿ ದೊರೆಯುವಂತೆ ಮಾಡಿದರು’ ಎಂದು ಸ್ಮರಿಸಿದರು.

ಕಾಂಗ್ರೆಸ್ ಮುಖಂಡರಾದ ಕೆ.ಎಂ. ಮಂಜುನಾಥ್, ಮಹಮ್ಮದ್ ಝಕ್ರಿಯಾ, ಎಂ.ಕೆ.ಲಿಯಾಕತ್ ಅಲಿ, ಕೆ.ಜಿ. ರಹಮತ್ ಉಲ್ಲಾ, ಬಿ.ಎಚ್. ಉದಯಕುಮಾರ್, ಡಿ. ಶಿವಕುಮಾರ್, ಕೆ. ಕಲೀಲ್ ಅಹ್ಮದ್, ಎನ್.ಎಸ್. ವೀರಭದ್ರಪ್ಪ, ಖಾಜಿ ಕಲೀಲ್, ಎಲ್. ವಸಂತ್ ನಾಯಕ್, ಸುರೇಶ್ ಬಿ.ಎಸ್., ಫಾರೂಕ್, ಕೇಶವ್ ನಾಯಕ್, ಬಿ ಕೊಟ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT