ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್‌ 1ರಿಂದ

1500 ಮಂದಿಗೆ ಊಟ, ಶಾಮಿಯಾನದ ಒಳಗೆ 22 ಪುಸ್ತಕ ಮಳಿಗೆ, ಮೆರವಣಿಗೆಗೆ ಸಿದ್ಧತೆ
Last Updated 1 ಮಾರ್ಚ್ 2021, 3:43 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯಾನಗರದ ಕುವೆಂಪು ಕನ್ನಡ ಭವನ ಸಜ್ಜುಗೊಂಡಿದೆ. ವೇದಿಕೆ, ಸಭಾಂಗಣ, ಊಟ, ಮೆರವಣಿಗೆಗೆ ಸಿದ್ಧತೆಗಳಾಗಿವೆ.

ಸಮ್ಮೇಳನದ ಸರ್ವಾಧ್ಯಕ್ಷ ಎನ್‌.ಟಿ. ಯರ‍್ರಿಸ್ವಾಮಿ ಸಾರೋಟು ಏರಲು ನಿರಾಕರಿಸಿರುವುದರಿಂದ ಈ ಬಾರಿ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಸಾರೋಟು ಇರುವುದಿಲ್ಲ. ಕನ್ನಡ ಭುವನೇಶ್ವರಿ ದೇವಿಯ ವಿಗ್ರಹದೊಂದಿಗೆ ವಿದ್ಯಾನಗರದ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಸರ್ವಾಧ್ಯಕ್ಷರು ಮೆರವಣಿಗೆಯಲ್ಲಿ ನಡೆದುಕೊಂಡು ಬರಲಿದ್ದಾರೆ.ಡೊಳ್ಳು ಕುಣಿತ, ವೀರಗಾಸೆ, ಕೀಲುಕುದುರೆ, ಮಕ್ಕಳ ಬ್ಯಾಂಡ್‌ಸೆಟ್‌ಗಳು ಇರಲಿವೆ. ಮೆರವಣಿಗೆಯಲ್ಲಿ ಆಸಕ್ತಕೆಲವೇ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹೆಚ್ಚು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

12 ಸಾವಿರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿತ್ತು. 11 ಸಾವಿರ ಮಂದಿಗೆ ಕಳುಹಿಸಲಾಗಿತ್ತು. ಅದರಲ್ಲಿ ವಿಳಾಸ ಬದಲಾಗಿರುವ, ಸ್ವಷ್ಟವಿಲ್ಲದ ಸುಮಾರು 1 ಸಾವಿರದಷ್ಟು ಆಹ್ವಾನ ಪತ್ರಿಕೆಗಳು ವಾಪಸ್ಸಾಗಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ. ಡಾ.ಎಂ.ಜಿ. ಈಶ್ವರಪ್ಪ, ಪ್ರೊ. ಭಿಕ್ಷಾವರ್ತಿಮಠ, ಬಿ.ಎನ್‌. ಮಲ್ಲೇಶ್‌, ಬಾ.ಮ. ಬಸವರಾಜಯ್ಯ, ಪ‍್ರೊ.ಸಿ.ನರಸಿಂಹಪ್ಪ ಅವರ ಅಧ್ಯಕ್ಷತೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೂಡ ಆಯ್ದ 6 ತಂಡಗಳು ಮಾತ್ರ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.

‘20 ಪುಸ್ತಕ ಮಳಿಗೆಗಳಿಗೆ ಶಾಮಿಯಾನದ ಒಳಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಅನೇಕ ಮಂದಿಯಿಂದ ಬೇಡಿಕೆ ಬಂದಿದ್ದವು. ಅದರಲ್ಲಿ ಇಬ್ಬರಿಗೆ ಶಾಮಿಯಾನದ ಹೊರಗೆ ಮಳಿಗೆ ಹಾಕಲು ಅನುಮತಿ ನೀಡಿದ್ದೇವೆ. ಎಲ್ಲರಿಗೂ ಟೇಬಲ್‌, ಉಳಿದುಕೊಳ್ಳಲು ವ್ಯವಸ್ಥೆ, ಊಟ, ಉಪಾಹಾರದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ. ಮಳಿಗೆಗಳನ್ನು ಕೂಡ ಉಚಿತವಾಗಿಯೇ ನೀಡಲಾಗಿದೆ. ಅವರು ಓದುಗರಿಗೆ ರಿಯಾಯಿತಿ ದರದಲ್ಲಿ ಪುಸ್ತಕ ಒದಗಿಸಬೇಕು ಎಂಬುದಷ್ಟೇ ನಮ್ಮ ಷರತ್ತು’ ಎಂದರು.

ಮೊದಲ ದಿನ 1500 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಎರಡನೇ ದಿನ 1200 ಮಂದಿಗೆ ಊಟ ಇರುತ್ತದೆ. ಅದಕ್ಕಿಂತ ಹೆಚ್ಚು ಜನ ಬಂದರೆ ಆಹಾರ ಹೆಚ್ಚಿಸಲು ತಯಾರು ಮಾಡಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ಕನ್ನಡಾಭಿಮಾನಿಗಳು ಜ್ಞಾನದಾಸೋಹ ಮತ್ತು ಅನ್ನದಾಸೋಹ ಪಡೆದು ಸಂತೃಪ್ತಿಯಿಂದ ತೆರಳಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT