ಸುಲಿಗೆ ಮಾಡಿದ ಆರೋಪಿಗಳ ಬಂಧನ

ಸೋಮವಾರ, ಮೇ 27, 2019
28 °C

ಸುಲಿಗೆ ಮಾಡಿದ ಆರೋಪಿಗಳ ಬಂಧನ

Published:
Updated:
Prajavani

ದಾವಣಗೆರೆ: ಗಾಂಧಿನಗರ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಬೂದಿಹಾಳ್ ಗ್ರಾಮದ ಬಳಿ ವ್ಯಕ್ತಿಗಳಿಂದ ಹಣ ಹಾಗೂ ಒಡವೆ ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಎಸ್‌ಪಿಎಸ್‌ ನಗರದ ಸೈಯದ್ ಖಲೀಲ್, ಶಿವನಗರದ ಮುಬಾರಕ್‌ ಹಾಗೂ ಮಹಬೂಬ್‌ ನಗರದ ಸೈಪುಲ್ಲಾ  ಬಂಧಿತರು.

ಕಡ್ಲೇಬಾಳು ಗ್ರಾಮದ ವಾಸಿ ಲಕ್ಷ್ಮಣರಾಜು ಹಾಗೂ ಅಶ್ವಿನಿ ಅವರಿಂದ ಸುಲಿಗೆ ಮಾಡಲಾಗಿದೆ.

ದೊಡ್ಡಬೂದಿಹಾಳ್ ಗ್ರಾಮದ ಸ್ಮಶಾನದ ಬಳಿ ಬೈಕ್ ನಿಲ್ಲಿಸಿದಾಗ ಆರೋಪಿಗಳು ಲಕ್ಷಣರಾಜು ಮತ್ತು ಅಶ್ವಿನಿ ಅವರನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಹೊಡೆದು ಹೆದರಿಸಿ ಮೊಬೈಲ್‌, ಒಡವೆ ಹಾಗೂ ನಗದು ಕಿತ್ತುಕೊಂಡು ಪರಾರಿಯಾಗಿದ್ದರು.

ಆರೋಪಿಗಳು ಕಡೆಯಿಂದ ಕಿತ್ತುಕೊಂಡು ಹೋಗಿದ್ದ ಮೊಬೈಲ್‌ಗಳ ಐಎಂಇಐ ನಂಬರ್ ಮತ್ತು ಸಿಮ್ ಮೊಬೈಲ್ ಗಳಿಗೆ ಅಳವಡಿಸಿದ್ದ ಸಿಮ್ ಕಾರ್ಡ್‍ಗಳ ಸಿಡಿಆರ್ ಎ.ಎಸ್.ಡಿ.ಆರ್ ಮಾಹಿತಿ ಪಡೆದು ಇ.ಎಂ.ಇ.ಐ ನಂಬರ್‍ನಲ್ಲಿ ಸಿಮ್ ಕಾರ್ಡ್ ಆಕ್ಟಿವ್ ಆಗಿದ್ದ ಬಗ್ಗೆ ಮಾಹಿತಿ ಆಧಾರದ ಮೇರೆಗೆ ಪೊಲೀಸರು ಪತ್ತೆ ಮಾಡಿದ್ದಾರೆ.

ಆರೋಪಿಗಳಿಂದ ಒಂದು ಜೊತೆ ಬಂಗಾರದ 2 ತಾಳಿಗಳು ಮತ್ತು ಬಂಗಾರದ 2 ಸಣ್ಣ ಗುಂಡುಗಳು ಒಂದು ಬೈಕ್, 3 ಬೆಳ್ಳಿಯ ಉಂಗುರ, ಒಂದು ಜೊತೆ ಕಿವಿಯ ಓಲೆ, ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಎಸ್‌ಪಿ ಆರ್‌.ಚೇತನ್ ಆರ್, ಎಎಸ್‌ಪಿ ಟಿ.ಜೆ.ಉದೇಶ್, ಅವರ ಮಾರ್ಗದರ್ಶನದಲ್ಲಿ ಮತ್ತು ನಗರ ಡಿವೈಎಸ್‌ಪಿ ಎಸ್.ಎನ್ ನಾಗರಾಜ್‍ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ತನಿಖಾಧಿಕಾರಿ ನಗರ ವೃತ್ತ ಸಿಪಿಐ ಎಂ.ಶ್ರೀನಿವಾಸರಾವ್ ಹಾಗೂ ಗಾಂಧಿನಗರ ಠಾಣೆ ಪಿಎಸ್ಐ ಇಮ್ರಾನ್ ಹಾಗೂ ಮತ್ತು ಸಿಬ್ಬಂದಿ ಮಂಜುನಾಥ, ಧನರಾಜ್, ಗಿರಿಧರ್ ನಿಜಲಿಂಗಪ್ಪ, ಬಸವನಗೌಡ ಪಾಟೀಲ್‍ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !