ಭಾನುವಾರ, ಏಪ್ರಿಲ್ 5, 2020
19 °C

ರೈತರಿಗೆ ಜಾತಿ ಇಲ್ಲ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ವಿಶ್ವದ ಎಲ್ಲಾ ರೈತರು ಒಂದೇ. ಅವರಲ್ಲಿ ಯಾವುದೇ ಜಾತಿ ಇಲ್ಲ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ರಾಜ್ಯಮಟ್ಟದ ಕೃಷಿಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಂಚಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೆಗೆದುಕೊಂಡು ಹೋಗುತ್ತಿವೆ ಎಂದು ಶ್ಲಾಘಿಸಿದರು.

‘ತಾಲ್ಲೂಕಿನ ಎಲ್ಲಾ ಮುಖಂಡರು ಹಾಗೂ ಶಾಸಕ ರೇಣುಕಾಚಾರ್ಯ ಅವರು ಪಕ್ಷಬೇಧ ಮರೆತು ಬೆಂಗಳೂರಿಗೆ ಬಂದು ನನ್ನನ್ನು ಆಹ್ವಾನಿಸಿದರು. ನಾನು ಕಷ್ಟದಲ್ಲಿದ್ದಾಗ ಅತ್ತು ಕರೆದು ಮಾಡಿದ್ದು, ನನ್ನ ಗಮನಕ್ಕೆ ಬಂದಿದೆ. ಆದ್ದರಿಂದಲೇ ಕೇವಲ 48 ದಿನಗಳಲ್ಲಿ ನಾನು ಜೈಲಿನಿಂದ ಹೊರಬರಲು ಸಾಧ್ಯವಾಯಿತು. ನಿಮ್ಮ ಋಣ ತೀರಿಸಲು ಪ್ರಯತ್ನಿಸುತ್ತೇನೆ’ ಎಂದರು.

ಒಕ್ಕಲು ನಿಲ್ಲಿಸುವ ಪರಿಸ್ಥಿತಿ: ಬಿ.ಸಿ. ಪಾಟೀಲ

ಒಕ್ಕಲಿಗ ಒಕ್ಕಲನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಬೇಸರ ವ್ಯಕ್ತಪಡಿಸಿದರು.

ಶೇ 48ರಷ್ಟು ಯುವಕರು ಗ್ರಾಮಗಳನ್ನು ತೊರೆದು ನಗರ ಸೇರುತ್ತಿದ್ದಾರೆ. ಹೀಗಾದರೆ ದೇಶಕ್ಕೆ ಅನ್ನ ಕೊಡುವವರು ಯಾರು? ಕೇವಲ ಸಮ್ಮೇಳನಗಳನ್ನು ಮಾಡಿದರೆ ರೈತರ ಉದ್ದಾರ ಆಗುವುದಿಲ್ಲ. ಕೃಷಿ ಇಲಾಖೆ ಮುಖಾಂತರ ಕಾರ್ಯಕ್ರಮಗಳನ್ನು ರೈತರ ಮನೆಬಾಗಿಲಿಗೆ ತಲುಪಿಸಬೇಕು ಎಂದರು.

ರಾಜ್ಯದಲ್ಲಿ ಕೃಷಿ ಸಂಚಾರಿ ಕ್ಲಿನಿಕ್ ಪ್ರಾರಂಭಿಸಲಾಗುವುದು. ರೈತನಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ ಎಂದರು.

‘ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ಅಪೇಕ್ಷೆಯಂತೆ ರೈತನೇ ದರ ನಿಗದಿಪಡಿಸಿ ಮಾರುಕಟ್ಟೆಗೆ ಬಿಡಬೇಕು. ಇದು ನನ್ನ ಕನಸು ಕೂಡ’ ಎಂದರು.

ಒಂದು ಎಕರೆಯಲ್ಲಿ ಒಂದೇ ಬೆಳೆ ಬೆಳೆಯುವ ಮಂಡ್ಯದಲ್ಲಿ ಆತ್ಮಹತ್ಯೆ ಹೆಚ್ಚು. ಹತ್ತಾರು ಬೆಳೆಗಳನ್ನು ಬೆಳೆಯುವ ಕೋಲಾರದಲ್ಲಿ ಆತ್ಮಹತ್ಯೆ ಕಡಿಮೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು