ಮಂಗಳವಾರ, ಸೆಪ್ಟೆಂಬರ್ 21, 2021
27 °C

ಬೆಂಕಿ ಆಕಸ್ಮಿಕ: ಎರಡು ಮೇಕೆ ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತಾಲ್ಲೂಕಿನ ಚಿಕ್ಕ ತೊಗಲೇರಿಯಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಮೇಕೆಗಳು ಸಜೀವ ದಹನವಾಗಿವೆ. ಶೆಡ್‌ ಮತ್ತು ಟಿ ಅಂಗಡಿಗೆ ಹಾನಿಯಾಗಿದೆ.

ಚಿಕ್ಕತೊಗಲೇರಿಯ ನಾಗೇಂದ್ರಪ್ಪ ಅವರು ಶೆಡ್ ಮಾಡಿಕೊಂಡು ಅದರಲ್ಲಿ ಮೇಕೆಗಳನ್ನು ಕಟ್ಟಿದ್ದರು. ಜತೆಗೆ ಪಕ್ಕದಲ್ಲಿ ಟಿ ಅಂಗಡಿ ಕೂಡ ನಡೆಸುತ್ತಿದ್ದರು. ಭಾನುವಾರ ಅವರು ಜಮೀನಿಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದರಿಂದ ಅವಘಡ ಉಂಟಾಗಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ನಾಗೇಂದ್ರಪ್ಪ ಅವರಿಗೆ ತಾಲ್ಲೂಕು ಆಡಳಿತ ಪರಿಹಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.