ಬುಧವಾರ, ಜನವರಿ 27, 2021
21 °C

ಜ.15ರಿಂದ ನಿಧಿ ಸಮರ್ಪಣಾ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಜನವರಿ 15ರಿಂದ ಫೆಬ್ರುವರಿ 5ರವರೆಗೆ ನಡೆಯುವ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ಶುಕ್ರವಾರ ಸಂತರ ಸಮಾವೇಶ ನಡೆಯಿತು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕರ್ನಾಟಕದ ರಾಜ್ಯ ಸಹಾ ಪ್ರಮುಖ್ ಬಸವರಾಜ್ ಮಾತನಾಡಿ,  ‘ರಾಮ ಮಂದಿರಕ್ಕೆ ಬೇಕಾದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆಯದೇ ಭಕ್ತರಿಂದ ಪಡೆಯಲು ರಾಮ ಜನ್ಮ ಭೂಮಿಯ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ. ಜನವರಿ 15ರಿಂದ ಆರಂಭವಾಗುವ ಅಭಿಯಾನಕ್ಕೆ ಕೈಜೋಡಿಸಬೇಕು’ ಎಂದು ಸ್ವಾಮೀಜಿಗಳಲ್ಲಿ ಮನವಿ ಮಾಡಿದರು.

ಯರಗುಂಟೆಯ ಪರಮೇಶ್ವರ ಸ್ವಾಮೀಜಿ  ಮೊದಲನೆಯದಾಗಿ ದೇಣಿಗೆ ಸಮರ್ಪಿಸಿದರು. ಚನ್ನಗಿರಿಯ ಹಿರೇಮಠದ ಶಾಖಾಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮುಷ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹರಿಹರದ ರಾಮಕೃಷ್ಣ ಆಶ್ರಮದ ಶಾರದಾನಂದ ಸ್ವಾಮೀಜಿ, ಯರಗುಂಟೆಯ ಸಾಧ್ವಿ ಅಮ್ಮ ಮಾತಾಜಿ ಸುರೇಖಮ್ಮ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಮಧು, ವಿನಾಯಕ ರಾನಡೆ, ಅರುಣ ಗುಡ್ಡದಕೆರೆ, ವಿಶ್ವ ಹಿಂದೂ ಪರಿಷತ್‌ನ ಮಂಜಣ್ಣ, ಸಿ.ಎಸ್. ರಾಜು, ಮಂಜುನಾಥ್, ಕೃಷ್ಣಮೂರ್ತಿ ಇದ್ದರು.    

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು