ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಸಜ್ಜಾದ ಗಾಂಧಿ ಭವನ

ಸ್ವಾತಂತ್ರ್ಯ ಹೋರಾಟದ ನೆನಪುಗಳ ಅನಾವರಣಗೊಳಿಸುವ ಭವನ
Last Updated 2 ಸೆಪ್ಟೆಂಬರ್ 2021, 3:49 IST
ಅಕ್ಷರ ಗಾತ್ರ

ದಾವಣಗೆರೆ: ಕೆಂಪು ಹಂಚಿನ ಭವನದ ಸುತ್ತಲು ಹಸಿರು ಹೊದಿಕೆಯ ಭವ್ಯ ಉದ್ಯಾನ. ಇದರ ಮಧ್ಯೆ ಬಾಪೂಜಿ ಧ್ಯಾನದಲ್ಲಿ ಮಗ್ನರಾಗಿರುವ ಕಲಾಕೃತಿ. ಒಳಭಾಗದಲ್ಲಿ ಗ್ರಾನೈಟ್ ಕಲ್ಲಿನ ಭವ್ಯ ಪ್ರತಿಮೆ. ಗಾಂಧಿ ನಡೆಸಿದ ದಂಡಿ ಯಾತ್ರೆ.. ಹೀಗೆ ವಿವಿಧ ಬಗೆಯ ಸುಂದರ ಕಲಾಕೃತಿಗಳೊಂದಿಗೆ ₹ 3 ಕೋಟಿ ವೆಚ್ಚದಲ್ಲಿ ನಗರದ ರಾಮನಗರದಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನ ಲೋಕಾರ್ಪಣೆಗೆ ಸಜ್ಜಾಗಿದೆ.

ಸೆಪ್ಟೆಂಬರ್‌ 2ರಂದು ಉದ್ಘಾಟನೆಗೊಳ್ಳಲಿರುವ ಗಾಂಧಿ ಭವನ ನಗರದ ಎಸ್.ಎಸ್. ಆಸ್ಪತ್ರೆಯ ಬಳಿಯ ಆವರಗೆರೆ ಗ್ರಾಮದ ಸರ್ವೆ ನಂಬರ್ 213ರಲ್ಲಿ (ರಾಮನಗರ) 1 ಎಕರೆ ವಿಸ್ತೀರ್ಣದಲ್ಲಿ ನೂತನ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ ತಯಾರಾಗಿರುವ ಈ ಭವನದ ಹಿಂಭಾಗದಲ್ಲಿ ಆಕರ್ಷಕ ಉದ್ಯಾನ ನಿರ್ಮಾಣಗೊಂಡಿದೆ. ಅಂಗವಿಕಲರಿಗೆ ರ‍್ಯಾಂಪ್ ವ್ಯವಸ್ಥೆ, ಮಹಿಳೆಯರಿಗೆ, ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಹೊರಾಂಗಣದಲ್ಲಿ ಚರಕ ಜನರನ್ನು ಸ್ವಾಗತಿಸಿದರೆ, ಒಳಗೆ ಕಾಲಿಡುತ್ತಿದ್ದಂತೆ ಗಾಂಧಿ ಪ್ರತಿಮೆ ಎದುರುಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಗಾಂಧಿ ಭೇಟಿ ನೀಡಿದ ಸ್ಥಳಗಳು ಹಾಗೂ ದಾವಣಗೆರೆಯೊಂದಿಗೆ ಗಾಂಧಿಯ ನಂಟು, ಶಾಶ್ವತ ಗಾಂಧಿ ಸಾಹಿತ್ಯ ಕಲಾ ವಸ್ತು ಪ್ರದರ್ಶನ ಕೊಠಡಿ, ಮ್ಯೂಸಿಯಂ, 100 ಜನ ಕುಳಿತುಕೊಳ್ಳಬಲ್ಲ ಸುಂದರ ಸಭಾಂಗಣ, ಆಡಳಿತ ಕಚೇರಿ, ಇದರೊಂದಿಗೆ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳು, ವಿಚಾರಧಾರೆಗಳನ್ನು ಪ್ರತಿಬಿಂಬಿಸುವ ವಿಷಯಗಳು, ಅವರ ಜೀವನ ಚರಿತ್ರೆ ತಿಳಿದುಕೊಳ್ಳಬಯಸುವವರಿಗೆ ಸುಂದರ ಗ್ರಂಥಾಲಯ ಸೇರಿದಂತೆ ಅಲ್ಲಿರುವ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೆ.2ರಂದು ಮಧ್ಯಾಹ್ನ 3ಕ್ಕೆ ಗಾಂಧಿ ಭವನವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರೂ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT