ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಹೆಸರಿನಲ್ಲಿ ಬಂಗಾರದ ಒಡವೆ, ಹಣ ಪಡೆದು ವಂಚನೆ: ಪೂಜಾರಿ ಬಂಧನ

Last Updated 10 ಡಿಸೆಂಬರ್ 2021, 13:45 IST
ಅಕ್ಷರ ಗಾತ್ರ

ಹೊನ್ನಾಳಿ: ದೇವರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ವಂಚನೆ ಮಾಡಿದ ಸಂಬಂಧನಗರದ ಹಳದಮ್ಮ ದೇವಿ ದೇವಸ್ಥಾನದ ಪೂಜಾರಿಯನ್ನು ಬಂಧಿಸಲಾಗಿದೆ.

‘ನಿಮ್ಮ ಗಂಡನಿಗೆ ಮತ್ತು ನಿಮ್ಮ ಮನೆಗೆ ಗಂಡಾಂತರವಿದೆ. ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎಂದು ನಂಬಿಸಿ 120 ಗ್ರಾಂ ಬಂಗಾರದ ಒಡವೆ ಹಾಗೂ ₹ 2.80 ಲಕ್ಷ ನಗದು ತೆಗೆದುಕೊಂಡು ಪೂಜಾರಿ ಎಂ.ಜಿ. ಚಂದ್ರು ವಂಚಿಸಿದ್ದಾನೆ’ ಎಂದುನಗರದ ಕಲ್ಕೇರಿ ಬೀದಿಯ ನಿವಾಸಿ ಬಿ.ವಿ. ಪ್ರಮಿಳಾ ಸುಭಾಶ್ ದೂರು ನೀಡಿದ್ದರು.

ಈ ಬಗ್ಗೆ ಮಾಹಿತಿ ನೀಡಿದಸಿಪಿಐ ಟಿ.ವಿ. ದೇವರಾಜ್, ‘ಮಹಿಳೆಯನ್ನು ನಂಬಿಸಿ ಒಡವೆ, ಹಣ ಪಡೆದುಕೊಂಡ ಬಗ್ಗೆ ಡಿ.7ರಂದುಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿ ಎಂ.ಜಿ.ಚಂದ್ರು ಹಳದಮ್ಮ ದೇವಿ ದೇವಸ್ಥಾನದ ಹಿಂಭಾಗದಲ್ಲಿಯೇ ವಾಸ ಮಾಡುತ್ತಿದ್ದು, ಪೂಜಾರಿ ವೃತ್ತಿ ಮಾಡುತ್ತಿದ್ದ. ಆತನನ್ನು ಬಂಧಿಸಿ 120 ಗ್ರಾಂ ಬಂಗಾರದ ಒಡವೆ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಎಎಸ್‌ಪಿ, ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಸಿಪಿಐ ದೇವರಾಜ್, ಪಿಎಸ್‍ಐ ಬಸವನಗೌಡ ಬಿರಾದರ್, ಹಾಗೂ ಪಿಎಸ್‍ಐ ಅಜ್ಜಪ್ಪ, ಪೊಲೀಸ್ ಸಿಬ್ಬಂದಿ ಗಾಳಿ ಯೋಗೀಶ್, ಬಸವರಾಜ್, ನಾಗರಾಜ್, ಅಪರಾಧ ದಳದ ಸಿಬ್ಬಂದಿ ಸಿದ್ದನಗೌಡ, ಬೋಜಪ್ಪ ಕಿಚಡಿ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT