"ರೈತರ ಹಿತಕಾಯಲು ಸರ್ಕಾರ ಬದ್ಧ'

7
ಹುಚ್ಚವ್ವಹಳ್ಳಿಯಲ್ಲಿ ದೇವನಗರಿ ತೋಟಗಾರಿಕೆ ಉತ್ಪಾದಕ ಸಂಸ್ಥೆ ಸಂವಾದ ಕಾರ್ಯಕ್ರಮ

"ರೈತರ ಹಿತಕಾಯಲು ಸರ್ಕಾರ ಬದ್ಧ'

Published:
Updated:
Deccan Herald

ಮಾಯಕೊಂಡ: ‘ರೈತರ ಬೆಳೆಗೆ ಯೋಗ್ಯ ಬೆಲೆ ದೊರಕಿಸಿ, ಹಿತಕಾಯಲು ರೈತ ಉತ್ಪಾದಕ ಸಂಸ್ಥೆಗಳನ್ನು ಸಶಕ್ತಗೊಳಿಸಲು ಸರ್ಕಾರ ಬದ್ಧವಾಗಿದೆ’ ಎಂದು ಕೃಷಿ ಸಚಿವ ಎಚ್.ಎನ್. ಶಿವಶಂಕರ ರೆಡ್ಡಿ ಭರವಸೆ ನೀಡಿದರು.

ಸಮೀಪದ ಹುಚ್ಚವ್ವಹಳ್ಳಿಯಲ್ಲಿ ಸೋಮವಾರ ದೇವನಗರಿ ತೋಟಗಾರಿಕೆ ಉತ್ಪಾದಕ ಸಂಸ್ಥೆ ಸೋಮವಾರ ಏರ್ಪಡಿಸಿದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು ಬೆಳೆದ ಉತ್ಪನ್ನ ಮಾರಾಟ ಮಾಡುವುದೇ ಸಮಸ್ಯೆ. ಎಪಿಎಂಸಿ, ಸಂತೆ ಮತ್ತಿತರ ಕಡೆ ಉತ್ಪನ್ನಗಳನ್ನು  ಸಾಗಿಸುವದೇ ಕಷ್ಟವಾಗಿದೆ. ತೆಗೆದುಕೊಂಡು ಹೋದರೂ ಕೆಲವೆಡೆ ಖರೀದಿದಾರರು ಬರುವುದಿಲ್ಲ. ರೈತರನ್ನು ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಿ, ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸಲು ರೈತ ಉತ್ಪಾದಕ ಸಂಸ್ಥೆ ಆರಂಭಿಸಿದ್ದು, ಸಂಸ್ಥೆ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಉತ್ಪನ್ನ ಖರೀದಿಸಿದರೆ ಸರ್ಕಾರದ ಉದ್ದೇಶ ಈಡೇರುತ್ತದೆ. ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ’ ಎಂದರು.

‘ರೈತ ಉತ್ಪಾದಕ ಸಂಸ್ಥೆಗಳಿಗೆ ಕಟ್ಟಡ, ಯಂತ್ರಮನೆ ನಿರ್ಮಾಣಕ್ಕೆ ಜಾಗ ನೀಡಲು ಇರುವ ಕಾನೂನು ತೊಡಕಿನ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ವರದಿ ಸಲ್ಲಿಸಬೇಕು. ರೈತ ಉತ್ಪಾದಕ ಸಂಸ್ಥೆಗಳು ಬೇಡಿಕೆಯುಳ್ಳ ಪರಿಕರ ಮಾತ್ರ ಬಾಡಿಗೆ ಕೊಡಲು ಇಟ್ಟುಕೊಳ್ಳಬೇಕು’ ಎಂದರು.

‘ಫಸಲ್ ಭೀಮಾ ಯೋಜನೆ ಗೊಂದಲ ಮುಂದುವರಿದಿದೆ. ಸರ್ಕಾರ ತನ್ನ ಪಾಲಿನ ಕಂತು ಪಾವತಿಸಿದ್ದು, ವಿಮಾ ಪರಿಹಾರ ಎಷ್ಟು ಪ್ರಮಾಣದಲ್ಲಿ ರೈತರಿಗೆ ಬಳಕೆಯಾಗಿದೆ ಎಂಬ ವರದಿ ಸಲ್ಲಿಸಬೇಕು. ರೈತರಿಗೆ ಅನುಕೂಲವಾಗುವಂತೆ ನಿಯಮಾವಳಿ ಸಡಿಲಿಸಬೇಕು, ಪರಿಹಾರ ಪಡೆಯಲು ಇರುವ ಮಾನದಂಡ ಕುರಿತು ಪಾರದರ್ಶಕ ಮಾಹಿತಿ ನೀಡಬೇಕು’ ಎಂದರು.

‘ಎಲ್ಲ ರೈತರ ಸಾಲ ಮನ್ನಾ’

ಈಚಘಟ್ಟದಲ್ಲಿ ಕೃಷಿ ಹೊಂಡ ವೀಕ್ಷಿಸಿದ ಸಚಿವ ಎಚ್.ಎನ್. ಶಿವಶಂಕರ ರೆಡ್ಡಿ ಮಾತನಾಡಿ,‘ಕೃಷಿ ಭಾಗ್ಯ ಅತ್ಯುತ್ತಮ ಯೋಜನೆಯಾಗಿದೆ. ರೈತರು ಹೊಂಡದಲ್ಲಿ ನೀರು ಸಂಗ್ರಹಿಸಿ, ಮಳೆ ಇಲ್ಲದಾಗ ಬಳಸಿ, ಬೆಳೆ ಉಳಿಸಕೊಳ್ಳಬಹುದು. ರೈತರು ಆತ್ಮಹತ್ಯಗೆ ಮುಂದಾಗದೇ ಸರ್ಕಾರದ ಸೌಲಭ್ಯ ಬಳಸಿ ಆರ್ಥಿಕ ಸದೃಢರಾಗಬೇಕಿದೆ. ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮನ್ನಾ ಮಾಡಲಾಗಿದೆ. ಮುಂದಿನ ಅಧಿವೇಶನ ವೇಳೆಗೆ ಎಲ್ಲಾ ರೈತರ ಸಾಲ ಮನ್ನಾಮಾಡಲು ಚಿಂತನೆ ನಡೆದಿದೆ’ ಎಂದರು.

ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ‘ರೈತರು ಮಳೆಯಿಲ್ಲದೇ, ಬೆಳೆದ ಬೆಳೆಗೆ ಬೆಲೆಯಿಲ್ಲದೇ ನೊಂದಿದ್ದಾರೆ. ರೈತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವ ಅವಶ್ಯಕತೆಯಿದೆ. ಕೇವಲ ಸಾಲಮನ್ನಾ ಮಾಡಿದರೆ ಸಾಲದು ಉತ್ಪನ್ನ ಸಂಸ್ಕರಣೆಗೂ ನೆರವು ದೊರಕಿಸಬೇಕು. ಹೊಸ ತಳಿ ಅಭಿವೃದ್ಧಿಗೆ ಸಂಶೋಧನೆ ನಡೆಸಿ, ರೈತರಿಗೆ ಬಲ ತುಂಬಬೇಕು’ ಎಂದರು.

‘ದೇವನಗರಿ ತೋಟಗಾರಿಕೆ ಉತ್ಪಾದಕ ಸಂಸ್ಥೆ ಅಧ್ಯಕ್ಷ ಮುರಿಗೇಂದ್ರಪ್ಪ ಮಾತನಾಡಿ, ‘ನಮ್ಮ ಸಂಸ್ಥೆ ₹10 ಲಕ್ಷ ಆರಂಭಿಕ ಬಂಡವಾಳ ಹೊಂದಿದ್ದು, ಸರ್ಕಾರದಿಂದ ₹25 ಲಕ್ಷ ಸಹಾಯಧನ ಪಡೆದಿದೆ. ಸುಮಾರು ₹4 ಲಕ್ಷ ಲಾಭಗಳಿಸಿದೆ. ಸಂಸ್ಥೆಗೆ ಸಂಸ್ಕರಣಾ ಘಟಕ ಮತ್ತು ಮಾರಾಟ ಘಟಕ ತೆರೆಯಲು ಜಾಗದ ಅವಶ್ಯಕತೆಯಿದೆ. ಸರ್ಕಾರ ನಿವೇಶನ ನೀಡಿದರೆ ನಬಾರ್ಡ್ ನಿಂದ ಸಾಲ ಮತ್ತು ಸಹಾಯಧನ ದೊರೆಯಲಿದೆ’ ಎಂದರು.

ಜಿಲ್ಲಾಧಿಕಾರಿ ಡಿ. ಎಸ್. ರಮೇಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವತಿ, ಜಿಲ್ಲಾ ಪಂಚಾಯಿತಿ  ಸದಸ್ಯರಾದ ಶೈಲಜಾ ಬಸವರಾಜ್, ಕೆ.ಎಸ್‌.ಬಸವರಾಜು, ತಾಲ್ಲೂಕು ಪಂಚಾಯತಿ ಸದಸ್ಯರಾದ ನಾಗರಾಜ, ಉಮೇಶ ನಾಯ್ಕ, ಮಾಜಿ ಸದಸ್ಯ ಸುರೇಂದ್ರಪ್ಪ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಉಪ ನಿರ್ದೇಶಕಿ ಹಂಸವೇಣಿ, ಅಧಿಕಾರಿಗಳಾದ ಸಿರಿಯಣ್ಣ, ಶ್ರೀಧರಮೂರ್ತಿ, ತೋಟಗಾರಿಕೆ ಇಲಾಖೆಯ  ಉಪ ನಿರ್ದೇಶಕ ವೇದಮೂರ್ತಿ, ಅಧಿಕಾರಿಗಳಾದ ಯತಿರಾಜ್, ಅರುಣ್ ಕುಮಾರ್ , ದೇವನಗರಿ ರೈತ ಉತ್ಪಾದಕ ಸಂಸ್ಥೆ, ಹೆಬ್ಬಾಳು ವಿಶ್ವಬಂಧು ರೈತ ಉತ್ಪಾದಕ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರಾದ ವಿಜಯ ಕುಮಾರ್, ಮೂರ್ತಿ, ಕಂಬರಾಜ್, ತಿಪ್ಪೇಸ್ವಾಮಿ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !