ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಪಂಚಾಯತ್ ಉಪಚುನಾವಣೆ: ಅಡವಿಹಳ್ಳಿಯಲ್ಲಿ ಮತದಾನ ನೀರಸ

Last Updated 28 ಡಿಸೆಂಬರ್ 2021, 4:32 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಮೂರು ಸದಸ್ಯ ಸ್ಥಾನಗಳಿಗೆ ಸೋಮವಾರ ಉಪಚುನಾವಣೆ ನಡೆಯಿತು.

ಅಡವಿಹಳ್ಳಿ, ನಿಚ್ಚಾಪುರ ಮತ್ತುಉಚ್ಚಂಗಿದುರ್ಗ ಗ್ರಾಮದಲ್ಲಿ ನಡೆದ ಮತದಾನ ಶಾಂತಿಯುತವಾಗಿತ್ತು.
ನಿಚ್ಚಾಪುರ ಮತ್ತು ಉಚ್ಚಂಗಿದುರ್ಗದಲ್ಲಿಬೆಳಿಗ್ಗೆಯಿಂದಮತದಾನ ಚುರುಕು ಪಡೆದಿತ್ತು. ಆದರೆ ಅಡವಿಹಳ್ಳಿಯಲ್ಲಿ ಮಾತ್ರ ಮಧ್ಯಾಹ್ನ 12.30ರವರೆಗೂ 24 ಮತಗಳು ಮಾತ್ರ ಚಲಾವಣೆ ಆಗಿದ್ದವು.

ಉಚ್ಚಂಗಿದುರ್ಗದಲ್ಲಿ ಶೇ 84.85ರಷ್ಟು ಮತದಾನವಾಗಿದೆ. ನಿಚ್ಚಾಪುರ ಗ್ರಾಮದಲ್ಲಿ ಒಟ್ಟು 648 ಮತಗಳಿದ್ದು, ಒಟ್ಟು 559 ಜನ ಮತದಾನ ಮಾಡಿದ್ದಾರೆ. ಶೇ 86.24ರಷ್ಟು ಮತದಾನವಾಗಿದೆ.

ಅಡವಿಹಳ್ಳಿಯಲ್ಲಿ ನೀರಸ: ಅಡವಿಹಳ್ಳಿ ಗ್ರಾಮದಲ್ಲಿ ಒಂದು ಸದಸ್ಯ ಸ್ಥಾನಕ್ಕೆ ಒಟ್ಟು 726 ಮತಗಳಿದ್ದು ಒಟ್ಟು 228 ಮತ ಚಲಾವಣೆಯಾಗಿದೆ. ಅಡವಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲೂ ಬೆರಳೆಣಿಕೆ ಮತಗಳು ಚಲಾವಣೆಯಾಗಿತ್ತು.ಉಪಚುನಾವಣೆಯಲ್ಲೂ ಶೇ 29ರಷ್ಟು ಮತದಾನ ಆಗಿದೆ. ಜನರು ಪ್ರಭಾವಕ್ಕೆ ಒಳಗಾಗಿ ಮತದಾನ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಹಶೀಲ್ದಾರ್ ಎಲ್.ಎಂ.ನಂದೀಶ್, ಪಿಎಸ್ಐ ಪ್ರಕಾಶ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಚುನಾವಣೆ ಅಧಿಕಾರಿಗಳಾಗಿ ಉದಯಶಂಕರ್, ಜಯಮಾಲತೇಶ್, ಶಿವಯೋಗಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT