ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಾಣ ಹಂತದ ಶಾಲಾ ಕೊಠಡಿ ಗೋಡೆ ನೆಲಸಮ

Published 9 ಆಗಸ್ಟ್ 2024, 16:27 IST
Last Updated 9 ಆಗಸ್ಟ್ 2024, 16:27 IST
ಅಕ್ಷರ ಗಾತ್ರ

ಹರಿಹರ: ನಗರದ ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿರುವ ಹಳ್ಳದಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕೊಠಡಿ ಮತ್ತು ಶೌಚಾಲಯದ ಗೋಡೆಗಳನ್ನು ಕಿಡಿಗೇಡಿಗಳು ಕೆಡವಿದ ಘಟನೆ ನಡೆದಿದೆ.

ವಿವೇಕ್ ಯೋಜನೆಯಡಿ ₹9 ಲಕ್ಷ ಅನುದಾನದಲ್ಲಿ ಕೊಠಡಿ ಹಾಗೂ ಪಿಡಬ್ಲುಡಿ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾಮಗಾರಿ ಕೆಲ ದಿನಗಳಿಂದ ನಡೆಯುತ್ತಿತ್ತು. ಗೋಡೆ ನಿರ್ಮಾಣ ಕೆಲಸ ಬುಧವಾರ ನಡೆದಿತ್ತು. ಆದರೆ ಗೋಡೆಯ ಇಟ್ಟಿಗೆಗಳನ್ನು ಕೆಡವಿರುವುದು ಗುರುವಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಗಮನಕ್ಕೆ ಬಂದಿತು. 

ನಗರ ಠಾಣೆ ಪಿಎಸ್‌ಐ ಶ್ರೀಪತಿ ಗಿನ್ನಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ, ಸಿಆರ್‌ಪಿ ಬಸವರಾಜಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ದೂರು ನೀಡಲು ಪೊಲೀಸರು ಶಿಕ್ಷಕರಿಗೆ ಸೂಚಿಸಿದರು.

ಖಂಡನೆ: ಬಡಮಕ್ಕಳು ಓದುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲೆಡೆ ಸಾರ್ವಜನಿಕರು ಕೈಲಾದ ಸಹಕಾರ ಮಾಡುತ್ತಾರೆ. ಆದರಿಲ್ಲಿ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿರುವುದು ಖಂಡನೀಯ ಎಂದು ಶಿಕ್ಷಣ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹರಿಹರದ ಡಿಆರ್‌ಎಂ ಪ್ರೌಢಶಾಲೆ ಮೈದಾನದಲ್ಲಿರುವ ಹಳ್ಳದಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸುತ್ತಿದ್ದ ಕೊಠಡಿ ಗೋಡಗಳನ್ನು ಕಿಡಿಗೇಡಿಗಳು ಕೆಡವಿರುವುದು.
ಹರಿಹರದ ಡಿಆರ್‌ಎಂ ಪ್ರೌಢಶಾಲೆ ಮೈದಾನದಲ್ಲಿರುವ ಹಳ್ಳದಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸುತ್ತಿದ್ದ ಕೊಠಡಿ ಗೋಡಗಳನ್ನು ಕಿಡಿಗೇಡಿಗಳು ಕೆಡವಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT