ಬುಧವಾರ, ನವೆಂಬರ್ 20, 2019
22 °C

ಭಾರಿ ಮಳೆ: ಮನೆಗಳಿಗೆ ಹಾನಿ, ತುಂಬಿದ ಕೆರೆಗಳು

Published:
Updated:
Prajavani

ಜಗಳೂರು: ತಾಲ್ಲೂಕಿನಾದ್ಯಾಂತ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗಡಿಮಾಕುಂಟೆ ಮತ್ತು ಸಂಗೇನಹಳ್ಳಿ ಕೆರೆಗಳಿಗಳಿಗೆ 8 ಅಡಿ ನೀರು ಬಂದಿದ್ದು, ಜಮ್ಮಾಪುರ ಸೇರಿ ಹಲವು ಕೆರೆಗಳಿಗೆ ಎರಡು ಅಡಿ ನೀರು ಬಂದಿದೆ.

ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಳೆ ರಭಸಕ್ಕೆ ಕೆಲ ಮನೆಗಳ ತಗಡಿನ ಶೀಟು, ಹೆಂಚುಗಳು ಹಾರಿಹೋಗಿವೆ. ಕೆಲ ಮನೆಗಳ ಗೋಡೆಗಳು ಕುಸಿದಿವೆ. ಮನೆಗಳಲ್ಲಿ ಮಲಗಿದ್ದವರು ಮಳೆಯ ಶಬ್ದಕ್ಕೆ ಎಚ್ಚರಗೊಂಡು ಮನೆಯಿಂದ ಹೋರ ಬಂದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆ ಕುಸಿದ ಕಾರಣ ಕೆಲವರು ಅಕ್ಕ ಪಕ್ಕದ, ಹಾಗೂ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದರು.

ಜಗಳೂರಿನಲ್ಲಿ 37.5 ಮಿ.ಮೀ., ಸಂಗೇನಹಳ್ಳಿ 159 ಮಿ.ಮೀ., ಸೊಕ್ಕೆ 73.1 ಮಿ.ಮೀ., ಬಿಳಿಚೋಡು 20 ಮಿ.ಮೀ., ಚಿಕ್ಕಬಂಟನಹಳ್ಳಿ 40 ಮಿ.ಮೀ. ಸೇರಿ ಒಟ್ಟು 65.92 ಮಿ.ಮೀ. ಮಳೆಯಾಗಿದೆ.

ತಾಲೂಕಿನ ಬಗ್ಗೇನಹಳ್ಳಿ ಕೊರಟಿಕೆರೆಯಲ್ಲಿ 4, ಬಸಪ್ಪನಹಟ್ಟಿ 2, ಹುಚ್ಚಂಗಿಪುರ 3, ಬಸವನಕೋಟೆ 1, ದೊಡ್ಡಬೊಮ್ಮನಹಳ್ಳಿ 1, ಗುರುಸಿದ್ದಾಪುರ 2, ಚಿಕ್ಕ ಉಜ್ಜಿನಿಯಲ್ಲಿ 1 ಮನೆಗೆ ಹಾನಿಯಾಗಿದೆ.

ಪ್ರತಿಕ್ರಿಯಿಸಿ (+)