ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು | ಮುಂಗಾರು ಬಿತ್ತನೆಗೆ ಹದ ಮಳೆ; ರೈತರ ಸಂತಸ

Published 6 ಜೂನ್ 2024, 16:07 IST
Last Updated 6 ಜೂನ್ 2024, 16:07 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನ ಹಲವೆಡೆ ಗುರುವಾರ ಸಂಜೆ ಭಾರಿ ಮಳೆಯಾಗಿದ್ದು, ಗೋಕಟ್ಟೆ, ಚೆಕ್ ಡ್ಯಾಂಗಳು ಭರ್ತಿಯಾಗಿ ಹಳ್ಳ ಹರಿಯುತ್ತಿವೆ.

ಬಿಳಿಚೋಡು ಹೋಬಳಿ ವ್ಯಾಪ್ತಿಯ ಪಲ್ಲಾಗಟ್ಟೆ, ಸೊಕ್ಕೆ ಹೋಬಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುಮಾರು ಒಂದು ತಾಸು ಬಿರುಮಳೆ ಸುರಿಯಿತು.

ಅಸಗೋಡು, ದಿದ್ದಿಗೆ, ಪಲ್ಲಾಗಟ್ಟೆ, ಮೆದಿಕೆರೇನಹಳ್ಳಿ, ಗಡಿಮಾಕುಂಟೆ, ಗೊಡೆ ತಾರೇಹಳ್ಳಿ, ಜಗಳೂರು, ಹುಚ್ಚಂಗಿಪುರ ಮುಂತಾದೆಡೆ ಸಮೃದ್ಧ ಮಳೆಯಾಗಿದೆ. ಪಲ್ಲಾಗಟ್ಟೆ ಗ್ರಾಮದ ಸಮೀಪ ಸಣ್ಣ ನೀರಾವರಿ ಇಲಾಖೆಯಿಂದ ಈಚೆಗೆ ರೂ. ₹ 50 ಲಕ್ಷ ವೆಚ್ಚದಲ್ಲಿ ಚನ್ನಪ್ಪನಕಟ್ಟೆ ಹಳ್ಳಕ್ಕೆ ನಿರ್ಮಿಸಿದ್ದ ದೊಡ್ಡ ಚೆಕ್ ಡ್ಯಾಂ ಮೈದುಂಬಿ ಹರಿಯುತ್ತಿದೆ.

ಕಳೆದ ವರ್ಷ ಬರಗಾಲದ ಪರಿಣಾಮ ನಷ್ಟ ಅನುಭವಿಸಿರುವ ರೈತರು ಪ್ರಸಕ್ತ ಮುಂಗಾರಿನಲ್ಲಿ ಹೊಲಗಳನ್ನು ಬೇಸಾಯ ಮಾಡಿ ಹದ ಮಾಡಿಟ್ಟುಕೊಂಡು ಉತ್ತಮ ಮಳೆಗಾಗಿ ಕಾಯುತ್ತಿದ್ದರು. ನಿರೀಕ್ಷೆಯಂತೆ ಮಳೆ ಸುರಿದಿದ್ದು, ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ.

ಜಗಳೂರು ಪಟ್ಟಣದ ಮಧ್ಯಭಾಗದಲ್ಲಿ  ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ನೀರು ನಿಂತು ಹಳ್ಳದಂತಾಗಿರುವ  ರಸ್ತೆ
ಜಗಳೂರು ಪಟ್ಟಣದ ಮಧ್ಯಭಾಗದಲ್ಲಿ  ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ನೀರು ನಿಂತು ಹಳ್ಳದಂತಾಗಿರುವ  ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT