ಶನಿವಾರ, ಜುಲೈ 24, 2021
23 °C
ಕೋವಿಡ್–19 ಪರಿಣಾಮ: ಕ್ಷೀಣಿಸಿದ ವಾಹನಗಳ ಸಂಖ್ಯೆ

ಹೆಬ್ಬಾಳ್ ಟೋಲ್‌: ಶೇ 40ರಷ್ಟು ಆದಾಯ ಕುಸಿತ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಾಕ್‌ಡೌನ್‌ನಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಹೆಬ್ಬಾಳು ಟೋಲ್‍ನಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಶೇ 40ರಿಂದ 50ರಷ್ಟು ಆದಾಯ ಕುಸಿತ ಕಂಡಿದೆ.

ಲಾಕ್‌ಡೌನ್‌ಗೂ ಮುನ್ನಾ ಟೋಲ್‌ ಮೂಲಕ 20 ಸಾವಿರದಿಂದ 25 ಸಾವಿರ ವಾಹನಗಳು ಸಂಚರಿಸಿದ್ದವು. ಆದರೆ ಈಗ ಕೇವಲ 10 ಸಾವಿರದಿಂದ 12 ಸಾವಿರ ವಾಹನಗಳು ಸಂಚರಿಸುತ್ತಿವೆ. ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗಿರುವುದರಿಂದ ಗೂಡ್ಸ್ ವಾಹನಗಳು ಬರುವುದು ಕಡಿಮೆಯಾಗಿವೆ.

ಸುರಕ್ಷತಾ ಕ್ರಮ: ಟೋಲ್ ನಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ಟೋಲ್ ನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿಗೆ ಗ್ಲೌಸ್, ಮಾಸ್ಕ್, ಸೇಫ್ಟಿ ಜಾಕೆಟ್ ನೀಡಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಗೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ನೌಕರರ ಸಂಖ್ಯೆಯೂ ಕಡಿಮೆಯಾಗಿದೆ. ಈ ಹಿಂದೆ ನೂರು ಮಂದಿ ನೌಕರರು ಇದ್ದರು. ಈಗ ಕೇವಲ 75 ನೌಕರರು ಇದ್ದಾರೆ.

ಫಾಸ್ಟ್‌ಟ್ಯಾಗ್ ರೀಡಿಂಗ್ ಸಮಸ್ಯೆ ಇಲ್ಲ:‘ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ರೀಡಿಂಗ್ ಸಮಸ್ಯೆ ಇಲ್ಲ. ಶೇ 95ರಷ್ಟು ಕೆಲಸಗಳು ನಡೆಯುತ್ತಿವೆ. ಬದಲಾಗಿ ಬ್ಯಾಂಕ್‌ಗಳಲ್ಲಿ ಸರ್ವರ್‌ ಡೌನ್ ಇದ್ದರೆ ಫಾಸ್ಟ್‌ ಟ್ಯಾಗ್ ರೀಡಿಂಗ್ ಕಷ್ಟವಾಗುತ್ತದೆ. ಟೋಲ್‌ನಲ್ಲಿ 12 ಲೈನ್‌ಗಳು ಇದ್ದು, ಅವುಗಳಲ್ಲಿ ಎಡ ಹಾಗೂ ಬಲಭಾಗದ ಎರಡನೇ ಲೈನ್‌ಗಳು ಕ್ಯಾಶ್‌ಲೈನ್‌ಗಳಾಗಿವೆ. ಟೋಲ್‌ನ ಮಧ್ಯ ಭಾಗದಲ್ಲಿ ಇರುವ ಎರಡು ಲೈನ್‌ಗಳನ್ನು ಆಂಬುಲೆನ್ಸ್, ವಿವಿಐಪಿ ಹಾಗೂ ಪೊಲೀಸರಿಗಾಗಿ ಮೀಸಲಿಡಲಾಗಿದೆ’ ಎನ್ನುತ್ತಾರೆ ಟೋಲ್‌ನ ಉಸ್ತುವಾರಿ ವಹಿಸಿಕೊಂಡಿರುವ ಮಾರುತಿ ಬಿ.ಎನ್. 

 

‘ಟೋಲ್‌ನಲ್ಲಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಬೆಂಗಳೂರಿಗೆ ಹೆಚ್ಚಿನ ಮಂದಿ ಹೋಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಕಡಿಮೆ ಚಲಿಸಿವೆ. ರಾತ್ರಿ ವೇಳೆ ವಾಹನಗಳ ಸಂಖ್ಯೆ ಕಡಿಮೆ ಇದೆ. ಪ್ರಯಾಣಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಮಾಸ್ಕ್ ಹಾಕದವರಿಗೆ ಗಾಡಿ ಪಾಸ್ ಮಾಡೊಲ್ಲ ಎಂದು ಹೇಳುತ್ತೇವೆ. ಪೊಲೀಸರೂ ಕೋವಿಡ್‌–19 ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಾಹನದಲ್ಲಿ ಹೋಗುವವರನ್ನು ಉಗುಳಲು ಬಿಡುವುದಿಲ್ಲ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು