ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಗಾಜಿನ ಮನೆಗೆ ಬರಲಿದೆ ಆರ್ದ್ರಕ ವ್ಯವಸ್ಥೆ

Published 3 ಜನವರಿ 2024, 5:03 IST
Last Updated 3 ಜನವರಿ 2024, 5:03 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಗಾಜಿನ ಮನೆಗೆ ಪ್ರವಾಸಿಗರಿಗೆ ತಂಪು ನೀಡುವ ಉದ್ದೇಶದಿಂದ ಹ್ಯುಮಿಡಿಫಿಯರ್ ಆರ್ದಕ (ತೇವಗೊಳಿಸುವ ಸಾಧನ)ವನ್ನು ಅಳವಡಿಸುವ ಯೋಜನೆಯನ್ನು ತೋಟಗಾರಿಕೆ ಇಲಾಖೆ ಹಾಕಿಕೊಂಡಿದೆ.

‘ಬೇಸಿಗೆಯಲ್ಲಿ ಗಾಜಿನ ಮನೆಯಲ್ಲಿ ಹೆಚ್ಚು ಉಷ್ಣತೆ ಇದ್ದಾಗ ಪ್ರವಾಸಿಗರು ಕುಳಿತುಕೊಳ್ಳುವುದು, ಇಲ್ಲವೇ ಸಂಚರಿಸಲು ಕಷ್ಟವಾಗುತ್ತದೆ. ಬಿಸಿಲು ಹೆಚ್ಚಾಗಿದ್ದರೆ ಆರಾಮವಾಗಿ ವಿಹರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಗಾಜಿನ ಮೇಲೆ ನೀರನ್ನು ಚಿಮ್ಮಿಸುವ ಮೂಲಕ ತಂಪು ವಾತಾವರಣ ಸೃಷ್ಟಿಸುವ ಉದ್ದೇಶವಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕಳೆದ ವರ್ಷದಿಂದ ಸಂಗೀತ ಕಾರಂಜಿ ಆರಂಭಿಸಲಾಗಿದೆ. ಹಾನಿಯಾಗಿರುವ ಗಾಜನ್ನು ಗಾಜನ್ನು ಬದಲಿಸಲಾಗುತ್ತಿದೆ. ಪ್ರತಿವರ್ಷ ಫಲಪುಷ್ಪ ಪ್ರದರ್ಶನ ನಡೆಯು ಗಾಜುಗಳ ಮೇಲೆ ನೀರನ್ನು ಸಣ್ಣ ಪ್ರಮಾಣದಲ್ಲಿ ಚಿಮ್ಮಿಸುವುದರಿಂದ ಗಾಜಿನ ಉಷ್ಣತೆ ಕಡಿಮೆಯಾಗುತ್ತದೆ. ಇದು ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಹೇಳಿದರು.

‘ಗಾಜಿನ ಮನೆಯನ್ನು ಸಂಪರ್ಕಿಸುವ ಮುಖ್ಯ ಬೀದಿಗಳಲ್ಲಿ ಸ್ಮಾರ್ಟ್‌ಸಿಟಿಯಿಂದ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಶಾಮನೂರು ರಸ್ತೆಯ ಬಾಟ್ಲಿ ಬಿಲ್ಟಿಂಗ್‌ನಿಂದ ಗಾಜಿನ ಮನೆಗೆ ಬಸ್‌ ಸೌಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬಸ್‌ ಸಂಪರ್ಕ ಕಲ್ಪಿಸಲು ಸರ್ವೀಸ್ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ರಸ್ತೆ ದುರಸ್ತಿಯ ಬಳಿಕ ಹೈವೇಯಿಂದ ಗಾಜಿನ ಮನೆಗೆ ನೇರ ಬಸ್ ಸೌಲಭ್ಯ ಸಿಕ್ಕರೆ ಹೆಚ್ಚಿನ ಪ್ರವಾಸಿಗರ ಭೇಟಿ ನೀಡುತ್ತಾರೆ’ ಎಂದು ತಿಳಿಸಿದರು.

4.61 ಲಕ್ಷ ಪ್ರವಾಸಿಗರ ಭೇಟಿ: ಗಾಜಿನ ಮನೆಗೆ 2023 ಡಿಸೆಂಬರ್ ಅಂತ್ಯದವರೆಗೆ 4.61 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ₹ 49 ಲಕ್ಷದಿಂದ ₹50 ಲಕ್ಷ ಮೊತ್ತ ಸಂಗ್ರಹವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘2023ರ ಏಪ್ರಿಲ್‌ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಗಾಜಿನ ಮನೆ ಪ್ರವೇಶ ಶುಲ್ಕದಿಂದ ₹28.97 ಲಕ್ಷ ಹಾಗೂ ಸಂಗೀತ ಕಾರಂಜಿಯಿಂದ ₹2.32 ಲಕ್ಷ ಸೇರಿ ಒಟ್ಟು 31.29 ಲಕ್ಷ ಸಂಗ್ರಹವಾಗಿದೆ. 1.43 ಲಕ್ಷ ವಯಸ್ಕರು, 18,660 ಮಕ್ಕಳು ಸೇರಿದಂತೆ 1.61 ಜನರು ಭೇಟಿ ನೀಡಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 8 ತಿಂಗಳಲ್ಲಿ 597 ಕ್ಯಾಮೆರಾಗಳಿಗೆ ಅವಕಾಶ ನೀಡಲಾಗಿದೆ’ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಹೊಸ ವರ್ಷದ ಮೊದಲ ದಿವಸವಾದ ಸೋಮವಾರ ಗಾಜಿನ ಮನೆ ವೀಕ್ಷಣೆಗೆ 4,000 ಜನರು ಭೇಟಿ ನೀಡಿದ್ದಾರೆ. ಸಂಜೆ ನಡೆದ ಸಂಗೀತ ಕಾರಂಜಿಯನ್ನೂ ವೀಕ್ಷಿಸಿದರು ಎಂದು ಹೇಳಿದರು.

ಗಾಜಿನ ಮನೆಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರತಿ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನ ಹಾಗೂ ಸಂಗೀತ ಕಾರಂಜಿಯ ಲೇಸರ್ ಪ್ರದರ್ಶನಕ್ಕೂ ಹೆಚ್ಚಿನ ಜನರು ಭೇಟಿ ನೀಡಲಿದ್ದಾರೆ. ಗಾಜಿನ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಇನ್ನಷ್ಟು ಕಾರ್ಯಯೋಜನೆಗಳನ್ನು ರೂಪಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್ ಮಾಹಿತಿ ನೀಡಿದರು.

ದಾವಣಗೆರೆಯ ಗಾಜಿನ ಮನೆ (ಸಾಂದರ್ಭಿಕ ಚಿತ್ರ)
ದಾವಣಗೆರೆಯ ಗಾಜಿನ ಮನೆ (ಸಾಂದರ್ಭಿಕ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT