ಹೊನ್ನಾಳಿಯ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜಿನ ಪ್ರವೇಶದ್ವಾರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಮರಗಿಡಗಳನ್ನು ತೆರವುಗೊಳಿಸುವ ಕಾರ್ಯ ಬುಧವಾರ ನಡೆಯಿತು
ಹೊನ್ನಾಳಿ ಪಟ್ಟಣದೊಳಗೆ ತೋರಿಸಿದ ಜಾಗಗಳನ್ನು ಕ್ಯಾಂಟೀನ್ ಸ್ಥಾಪಿಸಲು ಗುತ್ತಿಗೆ ಪಡೆದಿರುವ ಕಂಪೆನಿ ತಿರಸ್ಕರಿಸಿದ್ದರಿಂದ ಕಾಲೇಜು ಆವರಣದಲ್ಲಿ ತೆರೆಯಲು ನಿರ್ಧರಿಸಲಾಗಿದೆ.
–ದೇವರಾಜ್, ಪುರಸಭೆ ಎಂಜಿನಿಯರ್
ಬಸ್ ನಿಲ್ದಾಣದ ಬಳಿ ಒಳಿತು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರೆ ಚೆನ್ನಾಗಿತ್ತು. ಇಲ್ಲಿಗೆ ಹಳ್ಳಿಯಿಂದ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಇಲ್ಲಿನ ತಿಂಡಿಗಾಡಿಗಳ ಮಾಲೀಕರು ವಿರೋಧಿಸಿದ್ದರಿಂದ ಅದನ್ನು ಕಾಲೇಜು ಆವರಣಕ್ಕೆ ಸ್ಥಳಾಂತರಿಸಿದ್ದು ಸರಿಯಲ್ಲ. ಇಲ್ಲಿಂದ ತಿಂಡಿ ಊಟಕ್ಕೆ ಕಾಲೇಜ್‌ಗೆ ನಡೆದುಕೊಂಡು ಹೋಗಲು ಸಾಧ್ಯವೇ. ಆ ಸ್ಥಳದ ಕುರಿತು ಪುನರ್ ಪರಿಶೀಲಿಸಬೇಕು.
– ಕೊತ್ತಂಬರಿ ಹಳದಪ್ಪ, ಆಟೊ ಚಾಲಕರ ಸಂಘದ ತಾಲ್ಲೂಕು ಅಧ್ಯಕ್ಷ