ದಾವಣಗೆರೆ: ಜಿಲ್ಲಾ ಚೆಸ್ ಕ್ಲಬ್ ವತಿಯಿಂದ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವ ಕಪ್ ಚೆಸ್ ಸ್ಪರ್ಧೆ ನಡೆಯಿತು.

ಸ್ಪರ್ಧೆ ಉದ್ಘಾಟಿಸಿದ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್ ಮಾತನಾಡಿ, ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಲು ಚೆಸ್ ಸಹಕಾರಿ. ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ‘ಬದುಕಿನ ಏಳುಬೀಳುಗಳನ್ನು ಎದುರಿಸುವ ಸ್ಥೈರ್ಯವನ್ನು ಚೆಸ್ ಆಟ ನೀಡುತ್ತದೆ. ಬುದ್ಧಿಶಕ್ತಿ ಹೆಚ್ಚಿಸುವ ಈ ಆಟದಲ್ಲಿ ಮಕ್ಕಳು ತೊಡಗಿಸಿಕೊಳ್ಳಲು ಹೆತ್ತವರು ಪ್ರೋತ್ಸಾಹ ನೀಡಬೇಕು’ ಎಂದರು.

ಪಂದ್ಯಾವಳಿಯಲ್ಲಿ ಹನ್ನೆರಡು ವರ್ಷದ ಒಳಗಿನ ಮತ್ತು ಹದಿನೆಂಟು ವರ್ಷದ ಒಳಗಿನ ಎರಡು ವಿಭಾಗಗಳಲ್ಲಿ ಎಂಬತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಆರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು.

ಫಲಿತಾಂಶ: ಹನ್ನೆರಡು ವರ್ಷದ ಒಳಗಿನ ವಿಭಾಗದಲ್ಲಿ ದಿಗಂತ್ ಎಂಎಸ್ ಪ್ರಥಮ ಸ್ಥಾನಿಯಾಗಿ ರಾಜ್ಯೋತ್ಸವ ಕಪ್ ಪಡೆದನು. ನಿಶ್ಚಲ್ ಜಿ.ಎಸ್. ದ್ವಿತೀಯ ಸ್ಥಾನಿಯಾದನು. ತನ್ನೈಜ, ಅಭಿನವ್, ಜೀವನ್ ಎಂ.ಎಸ್. ಕ್ರಮವಾಗಿ ಮೂರರಿಂದ ಐದನೇ ಸ್ಥಾನದವರೆಗೆ ಪಡೆದರು.

ಹದಿನೆಂಟು ವರ್ಷದ ಒಳಗಿನ ವಿಭಾಗದಲ್ಲಿ ಧನುಷ್ ಎಂ.ಎಸ್. ಕನ್ನಡ ರಾಜ್ಯೋತ್ಸವ ಕಪ್ ಪಡೆದನು. ಮಿಥುನ್ ಎಂ., ಭಾನುತೇಜಾ ಸಿ.ಎಂ., ವರದ್ ಎಂ. ಕುಬ್ಸದ್, ಗೌರೀಶ್ ಎಚ್.ಜಿ. ಎರಡರಿಂದ ಐದರವರೆಗೆ ಸ್ಥಾನಗಳನ್ನು ಪಡೆದರು.

ಸಂಘದ ಕಾರ್ಯದರ್ಶಿ ಯುವರಾಜ್, ಪದಾಧಿಕಾರಿ ಮಂಜುಳಾ ಯುವರಾಜ, ಗಂಗಾಧರ್, ತೀರ್ಪುಗಾರರಾದ ಚಿತ್ರದುರ್ಗದ ನವೀನ್ ಕುಮಾರ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.