ಸಾಸ್ವೆಹಳ್ಳಿ: ಸಮೀಪದ ಕಮ್ಮಾರಗಟ್ಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ‘ಜಾನಪದ ಜಾತ್ರೆ’ಯ ಸಂಭ್ರಮ ನಡೆಯಿತು. ವಿದ್ಯಾರ್ಥಿಗಳ ಪೋಷಕರಿಗಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವು ಜನಾಕರ್ಷಣೀಯವಾಗಿತ್ತು.

ಹಳ್ಳಿ ಸೊಗಡಿನ ಪರಿಕರಗಳು, ಎತ್ತಿನ ಗಾಲಿ, ಮಣ್ಣಿನ ಮಡಕೆ ಹಾಗೂ ತಳಿರು- ತೋರಣಗಳಿಂದ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಬೆಳಿಗ್ಗೆ ಗ್ರಾಮದ ರಾಮಾಂಜನೇಯ ಮಂದಿರದಲ್ಲಿ ಗೋ-ಪೂಜೆ ನೆರವೇರಿಸಿದ ಮಹಿಳೆಯರು, ಪೂರ್ಣಕುಂಭ ಮೇಳದೊಂದಿಗೆ ಅತಿಥಿಗಳನ್ನು ಎತ್ತಿನ ಗಾಡಿಯ ಮೆರವಣಿಗೆಯಲ್ಲಿ ಶಾಲೆಗೆ ಬರಮಾಡಿಕೊಂಡರು. ಶಾಲೆಯ ಆವರಣದಲ್ಲಿ ಪೋಷಕರಿಗೆ ಗ್ರಾಮೀಣ ಆಟಗಳನ್ನು ಆಯೋಜಿಸಲಾಗಿತ್ತು.

ಶಾಲೆಯ ಮುಖ್ಯೋಪಾಧ್ಯಾಯ ಬಿ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಮಹತ್ವ ಸಾರುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಬಿಇಒ ಕೆ.ಟಿ.ನಿಂಗಪ್ಪ, ಬಿಆರ್ಸಿ ಎಂ.ತಿಪ್ಪೇಶಪ್ಪ, ಟಿಪಿಇಒ ಜಗದೀಶ್, ಇಸಿಒಗಳಾದ ಮುದ್ದನ ಗೌಡ, ಹನುಮಂತ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಬಿ.ಹನುಮೇಶ್ ಮತ್ತು ಸದಸ್ಯರು, ಗ್ರಾಮದ ಮುಖಂಡರಾದ ಸಿದ್ದಪ್ಪ, ಹನುಮಂತಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.