ಸೋಮವಾರ, ಜನವರಿ 17, 2022
18 °C
ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಸ್ಥಾಪನೆ ಕಾರ್ಯಕ್ರಮ

‘ಮಾಡಿದ ಕೆಲಸಗಳಿಂದ ಉಳಿಯುತ್ತದೆ ಹೆಸರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಹುಟ್ಟಿದ ಮನುಷ್ಯ ಒಂದು ದಿನ ಸಾಯುತ್ತಾನೆ. ಹುಟ್ಟು–ಸಾವುಗಳ ನಡುವಿನ ಜೀವಿತಾವಧಿಯಲ್ಲಿ ಆತ ಮಾಡಿದ ಕೆಲಸಗಳೇ ಸಾವಿನ ನಂತರವೂ ಹೆಸರನ್ನು ಉಳಿಸುತ್ತವೆ. ಅದಕ್ಕೆ ಪುನೀತ್‌ ರಾಜ್‌ಕುಮಾರ್‌ ದೊಡ್ಡ ಉದಾಹರಣೆ’ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ಹೇಳಿದರು.

ನಗರದ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯಲ್ಲಿ ಸಿದ್ಧರಾಮೇಶ್ವರ ಯುವಕ ಸಂಘ, ಸಿದ್ಧಿ ವಿನಾಯಕ ಯುವಕರ ಸಂಘ, ಮಾರಿಕಾಂಬ ಯುವಕ ಸಂಘದ ಆಶ್ರಯದಲ್ಲಿ ಅಪ್ಪು ಅಭಿಮಾನಿಗಳ ಬಳಗ ಆಯೋಜಿಸಿದ್ದ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಉಸಿರು ನಿಂತ ನಂತರವೂ ಹೆಸರು ಉಳಿಯುವ ರೀತಿಯಲ್ಲಿ ಸೇವೆ ಮಾಡಬೇಕು. ಪುನೀತ್‌ ರಾಜ್‌ಕುಮಾರ್‌ ಬಲಗೈಯಲ್ಲಿ ಕೊಟ್ಟಿರುವುದು ಎಡಗೈಗೆ ಗೊತ್ತಾಗಬಾರದು ಎಂದು ಸೇವೆ ಮಾಡಿ
ದ್ದರು. ಪುನೀತ್‌ ಎಲ್ಲರಿಗೂ ಆದರ್ಶವಾಗಬೇಕು’ ಎಂದು ತಿಳಿಸಿದರು.

ಸಮನ್ವಯ ಸಮಿತಿಯ ಮುಪ್ಪಣ್ಣ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡ
ರಾದ ಎಚ್. ತಿಮ್ಮಣ್ಣ, ವೀರೇಶ್, ಶ್ರೀನಿವಾಸ್, ಎಚ್.ನಾಗರಾಜ್, ಎಚ್.ಎನ್. ರಾಜಪ್ಪ, ಮಾನಸ ತಿಪ್ಪೆಸ್ವಾಮಿ, ಎಲ್‍ಐಸಿ ಹನುಮಂತಪ್ಪ, ಎಸ್.ವಿ.ಈಶ್ವರ್, ಮುತ್ತುರಾಜ, ಲೋಕೇಶಪ್ಪ, ನಾಗರಾಜ್, ಕೆ.ಪಿ. ನಿರಂಜನ್, ಆನಂದ್ ಇದ್ದರು. ಸ್ಥಳೀಯ ಉದ್ಯಾನಕ್ಕೆ ಪುನೀತ್ ರಾಜ್‍ಕುಮಾರ್ ಉದ್ಯಾನ ಎಂದು ನಾಮಕರಣ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು