ಶನಿವಾರ, ಏಪ್ರಿಲ್ 1, 2023
23 °C

ಹೆಬ್ಬಾಳುವಿನಲ್ಲಿ ಲಸಿಕೆ ನಾಪತ್ತೆ ವದಂತಿಗೆ ಕಾರಣವಾದ ಸಂವಹನ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಂಡಲೂರು ಉಪ ಆರೋಗ್ಯ ಕೇಂದ್ರಕ್ಕೆ ಕೋವಿಡ್‌ ನಿರೋಧಕ ಲಸಿಕೆ ಒಯ್ದಿರುವ ಮಾಹಿತಿ ಇಲ್ಲದೇ ಇರುವುದು ಹೆಬ್ಬಾಳು ಆರೋಗ್ಯ ಕೇಂದ್ರದಲ್ಲಿ ಗೊಂದಲ ಉಂಟು ಮಾಡಿತು. 60 ಲಸಿಕೆ ಕಳವಾಗಿದೆ ಎಂದು ವದಂತಿ ಹಬ್ಬಿತ್ತು.

ಹೆಬ್ಬಾಳುವಿನ ವೈದ್ಯಾಧಿಕಾರಿ ಬರುವ ಮೊದಲು ಮಂಡಲೂರಿನ ಶುಶ್ರೂಷಕರು ಲಸಿಕೆ ಒಯ್ದಿದ್ದರು. ವೈದ್ಯರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಲಸಿಕೆ ಕಾಣೆಯಾಗಿದೆ ಎಂಬ ಹುಯಿಲು ಎದ್ದಿತು.

‘ಸಂವಹನ ಕೊರತೆಯಿಂದ ಹೀಗಾಗಿದೆ. ಮಂಡಲೂರಿಗೆ ನಮ್ಮದೇ ಬ್ಲ್ಯೂ ಕ್ಯಾರಿಯರ್‌ನಲ್ಲಿ ಒಯ್ಯಲಾಗಿತ್ತು. ಪರಸ್ಪರ ಮಾತನಾಡಿಕೊಂಡಿದ್ದರೆ ಇಂಥ ಗೊಂದಲ ಉಂಟಾಗುತ್ತಿರಲಿಲ್ಲ. ಯಾವುದೇ ಲಸಿಕೆ ದುರುಪಯೋಗ ಆಗಿಲ್ಲ’ ಎಂದು ಆರ್‌ಸಿಎಚ್‌ಒ ಡಾ. ಮೀನಾಕ್ಷಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.